ದೇಗುಲಗಳಲ್ಲಿ ನವರಾತ್ರಿ ವಿಶೇಷ ಪೂಜೆ

7

ದೇಗುಲಗಳಲ್ಲಿ ನವರಾತ್ರಿ ವಿಶೇಷ ಪೂಜೆ

Published:
Updated:
Deccan Herald

ಹೊಸಪೇಟೆ: ನವರಾತ್ರಿ ಉತ್ಸವದ ಅಂಗವಾಗಿ ನಗರ ಹಾಗೂ ತಾಲ್ಲೂಕಿನ ವಿವಿಧ ದೇವಸ್ಥಾನಗಳಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರದ ಅಮರಾವತಿಯ ಬನ್ನಿ ಮಹಾಂಕಾಳಿ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪುಷ್ಪಲಂಕಾರ, ಪಂಚಾಮೃತ ನೈವೇದ್ಯ ಸಮರ್ಪಿಸಲಾಯಿತು. ಇದೇ 19ರ ವರೆಗೆ ನಿತ್ಯ ಬೆಳಿಗ್ಗೆ 5ಕ್ಕೆ ರುದ್ರಾಭಿಷೇಕ ನಡೆಯುತ್ತದೆ. 19ರಂದು ಸಂಜೆ 4ಕ್ಕೆ ಚಂದ್ರಮೌಳೇಶ್ವರ ಸ್ವಾಮಿ ಉತ್ಸವಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಅಮ್ಮನ ದೇವಸ್ಥಾನಕ್ಕೆ ತರಲಾಗುತ್ತದೆ. ನಂತರ ಬನ್ನಿ ಮುಡಿಯಲಾಗುತ್ತದೆ.

ಹೊಸಪೇಟೆ ಕಲ್ಚರಲ್‌ ಅಸೋಸಿಯೇಸನ್‌ನಿಂದ ಟೌನ್‌ ರೀಡಿಂಗ್‌ ರೂಂನಲ್ಲಿ ಬುಧವಾರ ಬೆಳಿಗ್ಗೆ ವಿಶೇಷ ಪೂಜೆ ನಡೆಯಿತು. ಸಪ್ತಗಿರಿ ಶ್ರೀನಿವಾಸ ಸೇವಾ ಟ್ರಸ್ಟ್‌ನಿಂದ ಅಮರಾವತಿಯ ವೆಂಕಟೇಶ್ವರ ದೇಗುಲದಲ್ಲಿ ನವರಾತ್ರಿ ಉತ್ಸವ ಆಚರಿಸಲಾಯಿತು.

ತಾಲ್ಲೂಕಿನ ವೆಂಕಟಾಪುರ ಕ್ಯಾಂಪಿನ ಗುಡ್ಡದ ತಿಮ್ಮಪ್ಪ ದೇಗುಲದಲ್ಲಿ ಗೋಪೂಜೆ, ಕಲಶಪೂಜೆ, ಗಣಪತಿ ಹೋಮ ನಡೆಯಿತು. ತಾಲ್ಲೂಕಿನ ಹೊಸೂರಿನಲ್ಲಿ ಹೊಸೂರಮ್ಮ ದೇವಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !