ಹಕ್ಕು ಪತ್ರ ನೀಡಲು ಒತ್ತಾಯ

7

ಹಕ್ಕು ಪತ್ರ ನೀಡಲು ಒತ್ತಾಯ

Published:
Updated:

ಬೆಂಗಳೂರು: ‘ಮಲ್ಲೇಶ್ವರದ ಎಂ.ಆರ್.ಜಯರಾಂ ಕಾಲೊನಿಯ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು’ ಎಂದು ಕಾಂಗ್ರೆಸ್ ಮುಖಂಡ ಕೆಂಗಲ್ ಶ್ರೀಪಾದ ರೇಣು ‌ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿಯು ಕಾಲೊನಿಯನ್ನು ಕೊಳಚೆ ಪ್ರದೇಶವೆಂದು ಘೋಷಿಸಿ, ಅಲ್ಲಿ ವಾಸವಿದ್ದ ದಲಿತರು ಹಾಗೂ ಕೂಲಿ ಕಾರ್ಮಿಕರಿಗೆ ಪರಿಚಯ ಪತ್ರ ನೀಡಿದೆ. ಆದರೆ, ಇದುವರೆಗೂ ಹಕ್ಕು ಪತ್ರ ನೀಡಿಲ್ಲ’ ಎಂದು ದೂರಿದರು.

‘ಸದಾಶಿವನಗರದ ಈಜುಕೊಳದ ಬಳಿ ಬಸ್ ನಿಲ್ದಾಣ ನಿರ್ಮಾಣ ಮಾಡಿದ್ದರೆ, ಸಾರ್ವಜನಿಕರಿಗೆ ಉಪಯೋಗವಾಗುತ್ತಿತ್ತು. 13ನೇ ಮುಖ್ಯರಸ್ತೆಯ ಆರ್.ಎಂ.ವಿ ಬಡಾವಣೆಯಲ್ಲಿ ನಿಲ್ದಾಣ ನಿರ್ಮಿಸಿರುವುದರಿಂದ ಯಾರಿಗೂ ಉಪಯೋಗವಾಗುತ್ತಿಲ್ಲ. ಈ ಕಾಮಗಾರಿ ಕೈಗೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !