ಮಂಗಳವಾರ, ನವೆಂಬರ್ 19, 2019
28 °C

11ಸಾವಿರ ದಾಟಿದ ಡೆಂಗಿ ಪ್ರಕರಣ

Published:
Updated:
Prajavani

ಬೆಂಗಳೂರು: ರಾಜ್ಯದಲ್ಲಿ ಡೆಂಗಿ ಜ್ವರದ ಹಾವಳಿ ಮುಂದುವರೆದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ ಈವರೆಗೆ 11,065 ಮಂದಿ ಸೋಂಕಿನಿಂದ ಬಳಲಿದ್ದಾರೆ. ಜ್ವರದ ತೀವ್ರತೆಯಿಂದ 8 ಜನ ಮೃತಪಟ್ಟಿದ್ದಾರೆ. 

ಕಳೆದ ವರ್ಷ ಈ ವೇಳೆ 313 ಪ್ರಕರಣಗಳು ಡೆಂಗಿ ಪ್ರಕರಣ
ಗಳು ವರದಿಯಾಗಿದ್ದವು. ಆದರೆ, ಈ ವರ್ಷ ಡೆಂಗಿ ಪ್ರಕರಣಗಳು ನಾಲ್ಕು ಪಟ್ಟು ಹೆಚ್ಚು ವರದಿಯಾಗಿವೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 6,714 ಮಂದಿ ಡೆಂಗಿಯಿಂದ ಬಳಲಿದ್ದಾರೆ. ದಕ್ಷಿಣ ಕನ್ನಡ (1,027), ಶಿವಮೊಗ್ಗ (397), ಹಾವೇರಿ (283), ಚಾಮರಾಜನಗರ (222), ದಾವಣಗೆರೆ (197), ಉಡುಪಿ (196), ಕಲಬುರ್ಗಿ (195), ಚಿಕ್ಕಮಗಳೂರು (165) ಹಾಗೂ ಹಾಸನ (157) ಜಿಲ್ಲೆಯಲ್ಲಿ ಅಧಿಕ ಪ್ರಕರಣಗಳು ವರದಿಯಾಗಿವೆ. 

ಕಳೆದ ಒಂದು ವಾರದಲ್ಲಿ 383 ಡೆಂಗಿ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ ಮೂವರು ಡೆಂಗಿ ಜ್ವರಕ್ಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 2, ಶಿವಮೊಗ್ಗ, ರಾಮನಗರ ಹಾಗೂ ಚಿತ್ರದುರ್ಗದಲ್ಲಿ ತಲಾ ಒಬ್ಬರು ಡೆಂಗಿಗೆ ಕೊನೆಯುಸಿರೆಳೆದಿದ್ದಾರೆ. 

ರಾಜ್ಯದಲ್ಲಿ ಈವರೆಗೆ 1,896 ಚಿಕೂನ್‌ಗುನ್ಯಾ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 156 ಮಂದಿ ಚಿಕೂನ್‌ ಗುನ್ಯಾ ಜ್ವರದಿಂದ ಬಳಲಿದ್ದಾರೆ.

ಪ್ರತಿಕ್ರಿಯಿಸಿ (+)