ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಬಳಿ ₹ 9.24 ಕೋಟಿ ಮೌಲ್ಯದ ಆಸ್ತಿ

ಮಂಗಳವಾರ, ಏಪ್ರಿಲ್ 23, 2019
31 °C

ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಬಳಿ ₹ 9.24 ಕೋಟಿ ಮೌಲ್ಯದ ಆಸ್ತಿ

Published:
Updated:
Prajavani

ಚಾಮರಾಜನಗರ: ಇಲ್ಲಿನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರು ತಮ್ಮ ಹಾಗೂ ಕುಟುಂಬದ ಬಳಿ ₹ 9.24 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. 

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು ಆಸ್ತಿಯ ವಿವರಗಳನ್ನು ಉಲ್ಲೇಖಿಸಿದ್ದು, ₹ 4,58,93,254 ಮೌಲ್ಯದ ಚರಾಸ್ತಿ ಹಾಗೂ ₹ 4,65,25,000 ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ.

ಚರಾಸ್ತಿ ವಿವರ: ಧ್ರುವನಾರಾಯಣ ಅವರು ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ, ಅವರ ಬಳಿ ₹ 15 ಲಕ್ಷ ನಗದು ಇದೆ. ವಿವಿಧ ಬ್ಯಾಂಕುಗಳಲ್ಲಿ ₹ 37.20 ಲಕ್ಷದಷ್ಟು ಠೇವಣಿ ಇಟ್ಟಿದ್ದಾರೆ. ₹ 19.80 ಲಕ್ಷ ಮೌಲ್ಯದ ಇಸುಜು ಕಾರು ಮತ್ತು ₹ 11.22 ಲಕ್ಷ ಮೌಲ್ಯದ ಇನ್ನೊವಾ ಅವರು ಹೊಂದಿದ್ದಾರೆ. ₹ 3.15 ಲಕ್ಷ ವಿಮೆಯನ್ನೂ ಪಾವತಿಸುತ್ತಿದ್ದಾರೆ. ಉದ್ಯಮದಲ್ಲಿ ಹೂಡಿಕೆ ಮಾಡಿರುವ ಬಂಡವಾಳದ ಮೌಲ್ಯ ₹ 3.35 ಕೋಟಿ.

ಪತ್ನಿ ವೀಣಾ ಅವರು ₹ 3 ಲಕ್ಷ ನಗದು, ₹ 10 ಲಕ್ಷದ ವಿಮೆ, ₹ 50 ಸಾವಿರ ಮೌಲ್ಯದ ಜೆನ್‌ ಕಾರು, ₹ 4.15 ಲಕ್ಷ ಮೌಲ್ಯದ ಚಿನ್ನಾಭರಣ, ಎರಡು ಬ್ಯಾಂಕುಗಳಲ್ಲಿ ₹ 43,271 ಠೇವಣಿ ಸೇರಿದಂತೆ ₹ 18.08 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇಬ್ಬರು ಪುತ್ರರು ಕ್ರಮವಾಗಿ ₹ 2.61 ಲಕ್ಷ ಹಾಗೂ ₹ 3.31 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಸ್ಥಿರಾಸ್ತಿ ವಿವರ: ಎಲ್ಲ ಸ್ಥಿರಾಸ್ತಿಗಳೂ ಆರ್‌.ಧ್ರುವನಾರಾಯಣ ಅವರ ಹೆಸರಿನಲ್ಲೇ ಇವೆ. 

ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿ ಗ್ರಾಮದಲ್ಲಿ 12 ಎಕರೆ, ಭುಜಂಗನಪುರ ಗ್ರಾಮದಲ್ಲಿ 5 ಎಕರೆ 2 ಗುಂಟೆ, ಕೆರೆಹಳ್ಳಿ ಗ್ರಾಮದಲ್ಲಿ 2 ಎಕರೆ 23 ಗುಂಟೆ ಜಮೀನು ಇರುವುದಾಗಿ ಧ್ರುವನಾರಾಯಣ ಹೇಳಿದ್ದಾರೆ. ಇವುಗಳ ಮೌಲ್ಯ ₹ 1.24 ಕೋಟಿ.  ಜೆ.ಪಿ.ನಗರದ 8ನೇ ಹಂತದಲ್ಲಿ 4,000 ಚದರ ಅಡಿಯ ₹ 1.7 ಕೋಟಿ ಮೌಲ್ಯದ ಕೃಷಿಯೇತರ ಜಮೀನು ಮತ್ತು ಮೈಸೂರಿನ ವಿಜಯನಗರದ 4ನೇ ಹಂತದಲ್ಲಿ ₹ 1.60 ಕೋಟಿ ಮೌಲ್ಯದ ನಿವಾಸ ಹೊಂದಿರುವುದಾಗಿ ಅವರು ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ದುಪ್ಪಟ್ಟು ಹೆಚ್ಚ‌ಳ

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಧ್ರುವನಾರಾಯಣ ಅವರು ಹೊಂದಿದ್ದ ಆಸ್ತಿಗೆ ಹೋಲಿಸಿದರೆ, ಐದು ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯ ಎರಡು ಪಟ್ಟು ಹೆಚ್ಚಾಗಿದೆ. ₹ 1.05 ಕೋಟಿ ಚರಾಸ್ತಿ ಹಾಗೂ ₹ 2.10 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು ₹ 3.15 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಅವರು ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿಕೊಂಡಿದ್ದರು.

ಅವರು ಉದ್ಯಮದಲ್ಲಿ ಹೂಡಿಕೆ ಮಾಡಿದ್ದ ಬಂಡವಾಳದ ಮೌಲ್ಯ 2014ರಲ್ಲಿ ₹ 3‌2.50 ಲಕ್ಷ ಇತ್ತು. ಐದು ವರ್ಷಗಳಲ್ಲಿ ಅದು ₹ 3.35 ಕೋಟಿಗೆ ಏರಿದೆ. ಈ ಕಾರಣಕ್ಕೆ ಒಟ್ಟಾರೆ ಆಸ್ತಿ ಮೌಲ್ಯ ದುಪ್ಪಟ್ಟಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !