ಡಯಾಲಿಸಿಸ್‌ ಕೇಂದ್ರಕ್ಕಾಗಿ ನಗೆಹಬ್ಬ

7

ಡಯಾಲಿಸಿಸ್‌ ಕೇಂದ್ರಕ್ಕಾಗಿ ನಗೆಹಬ್ಬ

Published:
Updated:
Deccan Herald

ಬೆಂಗಳೂರು: ಲಯನ್ಸ್ ಕ್ಲಬ್ ಆಫ್ ಬೆಂಗಳೂರು, ‘ಬೆಳಕು’ ಸಂಸ್ಥೆ ವತಿಯಿಂದ ಪೀಣ್ಯದಾಸರಹಳ್ಳಿ ಶೆಟ್ಟಿಹಳ್ಳಿಯ ವಿಜಯಶ್ರೀ ಕನ್ವೆನ್‌ಷನ್‌ ಹಾಲ್‌ನಲ್ಲಿ ಬಡವರಿಗಾಗಿ ಡಯಾಲಿಸಿಸ್ ಸೆಂಟರ್ ಸ್ಥಾಪನೆಗೆ ಗಂಗಾವತಿ ಪ್ರಾಣೇಶ್ ತಂಡದಿಂದ ನಗೆಹಬ್ಬ ಆಯೋಜಿಸಲಾಗಿತ್ತು.

ಕ್ಲಬ್ ಅಧ್ಯಕ್ಷ ಲಯನ್ ಜಗದೀಶ್ ಮಾತನಾಡಿ, ‘ನಮ್ಮ ಸಂಸ್ಥೆಯಿಂದ ಈಗಾಗಲೇ ನೂರಾರು ಸೇವೆಗಳನ್ನು ಮಾಡುತ್ತಾ ಬಂದಿದ್ದೇವೆ. ರಕ್ತದಾನ, ಆರೋಗ್ಯ ಶಿಬಿರ, ನೆರೆಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಪೂರೈಕೆ ಸೇರಿದಂತೆ ಅನೇಕ ಸೇವೆಗಳನ್ನು ಮಾಡಿದ್ದೇವೆ. ಮುಂದೆಯೂ ಕೂಡ ಬಡಜನರ ಕಷ್ಟಕ್ಕೆ ಸ್ಪಂದಿಸುವುದೇ ನಮ್ಮ ಉದ್ದೇಶ’ ಎಂದು ಹೇಳಿದರು.

ಪಾಲಿಕೆ ಸದಸ್ಯ ಕೆ.ನಾಗಭೂಷಣ್, ಕ್ಲಬ್‌ ಕಾರ್ಯದರ್ಶಿ ಬಸವರಾಜು, ಖಜಾಂಚಿ ಶ್ರೀನಿವಾಸ್ ಬಿ., ಲಯನ್ ನಾಗೇಂದ್ರ ಚವ್ಹಾಣ್‌, ಲಯನ್ ಡಾ.ಟಿ.ಗೋವಿಂದರಾಜು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಾಣೇಶ್‌ ಸೇರಿದಂತೆ ಪ್ರಮುಖ ನಗೆ ಭಾಷಣಕಾರರು ನಗೆ ಚಟಾಕಿಗಳನ್ನುಹಾರಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಹಾಸ್ಯ ಚಟಾಕಿಗಳ ಮೂಲಕ ಆರೋಗ್ಯದ ಮಹತ್ವ ಸಾರುವಲ್ಲಿಯೂ ಭಾಷಣಕಾರರು ಯಶಸ್ವಿಯಾದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !