ಗಂಧದ ಮರ ಕಳವು ಯತ್ನ: ಆರೋಪಿ ಬಂಧನ, ಇಬ್ಬರು ಪರಾರಿ

7

ಗಂಧದ ಮರ ಕಳವು ಯತ್ನ: ಆರೋಪಿ ಬಂಧನ, ಇಬ್ಬರು ಪರಾರಿ

Published:
Updated:
Deccan Herald

ಕನಕಪುರ: ಕಾವೇರಿ ವನ್ಯಜೀವಿ ವಲಯ ಕನಕಪುರ ಉಪ ವಿಭಾಗದ ಬಸವನಬೆಟ್ಟ ಬ್ಯಾಡರಳ್ಳಿ ಗಸ್ತಿನಲ್ಲಿ ಗಂಧದ ಮರ ಕಡಿಯುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅರಣ್ಯಾಧಿಕಾರಿಗಳು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಹಲಗೂರು ಹೋಬಳಿ ಮಡಳ್ಳಿ ಗ್ರಾಮದ ಗುರುವೇಗೌಡರ ಮಗ ಶ್ರೀನಿವಾಸ (22) ಬಂಧಿತ ಆರೋಪಿ. ಮಡಳ್ಳಿ ಗ್ರಾಮದ ಚಂದ್ರ ಅವರ ಪುತ್ರ ರವಿ ಮತ್ತು ಹೆಸರು ತಿಳಿಯದ ತಾಳೆಹಳ್ಳದ ಮತ್ತೊಬ್ಬ ಆರೋಪಿ ಪರಾರಿಯಾಗಿರುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ದಾಸನಕೆರೆ ಮಟ್ಟ ಅರಣ್ಯದಲ್ಲಿ ಯಾರೋ ಮರ ಕಡಿಯುತ್ತಿದ್ದ ಶಬ್ದ ಕೇಳಿ ಕಾರ್ಯಾಚರಣೆ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

ಮರ ಕಡಿಯಲು ಬಳಸಿದ್ದ 2 ಗರಗಸ, 1 ಮಚ್ಚು, 1 ಕೊಡಲಿ ಹಾಗೂ ಗಂಧದ ಮರದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !