ಮಣ್ಣೆತ್ತು ತಯಾರಿಸುವ ಶರಣಪ್ಪ ಕುಟುಂಬ

7

ಮಣ್ಣೆತ್ತು ತಯಾರಿಸುವ ಶರಣಪ್ಪ ಕುಟುಂಬ

Published:
Updated:
ಇಳಕಲ್‌ನ ಜ್ಯೋತಿ ಶ. ಕುಂಬಾರ ಕುಟುಂಬ ಸದಸ್ಯರು ಮಾರಾಟಕ್ಕೆ ಸಿದ್ಧಪಡಿಸುತ್ತಿರುವ ಮಣ್ಣೆತ್ತುಗಳು

ಇಳಕಲ್‌: ಮಣ್ಣೆತ್ತಿನ ಅಮವಾಸ್ಯೆ ಮಣ್ಣಿನ ಮಕ್ಕಳ ಹಾಗೂ ನೆಲ ಮೂಲದ ಹಬ್ಬ. ಕಾರ ಹುಣ್ಣಿಮೆಯ ನಂತರ ಬರುವ ಮಣ್ಣೆತ್ತಿನ ಅಮಾವಾಸ್ಯೆಯಂದು ರೈತ ಕುಟುಂಬಗಳ ಚಿಣ್ಣರು ಸಂಭ್ರಮ ಹಾಗೂ ಸಡಗರದಿಂದ ರೈತನ ಒಡನಾಡಿ ಎತ್ತುಗಳನ್ನು ಮಣ್ಣಿನಲ್ಲಿ ತಯಾರಿಸಿ ಪೂಜಿಸುತ್ತಾರೆ.

ಇಲ್ಲಿಯ ಶರಣಪ್ಪ ಕುಂಬಾರ ಕುಟುಂಬದ ಸದಸ್ಯರು ಮಣ್ಣೆತ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಬದಲಾಗಿರುವ ಇಂದಿನ ದಿನಗಳಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗಿವೆ. ಆಧುನಿಕ ಯಂತ್ರೋಪಕರಣಗಳನ್ನು ನಂಬಿಕೊಂಡು ಅಧುನಿಕ ಬೇಸಾಯಕ್ಕಿಳಿದು ಸುಸ್ಥಿರ ಕೃಷಿಯಿಂದ ವಿಮುಖರಾಗಿ ರೈತರು ಅತಂತ್ರರಾಗಿದ್ದಾರೆ. ರೈತ ಕುಟುಂಬಗಳಿಗೆ ನೆರವಾಗಿ, ಆ ಮೂಲಕ ಜೀವನ ಕಟ್ಟಿಕೊಂಡಿದ್ದ ವಿವಿಧ ಕುಲಕಸುಬುಗಳು ಮಾಯವಾಗಿವೆ. ಕಂಬಾರಿಕೆ ಸೇರಿದಂತೆ ವಿವಿಧ ಕರಕುಶಲ ಕಾಯಕ ಜೀವಿಗಳ ಬದುಕು ಸಹ ಅತಂತ್ರವಾಗಿದೆ.

ಆದರೂ ಒಂದಿಷ್ಟು ಕುಟುಂಬಗಳು ಅಲ್ಪ ಪ್ರಮಾಣದಲ್ಲಿಯಾದರೂ ಕುಲಕಸುಬುಗಳನ್ನು ಮುಂದುವರಿಸಿವೆ. ಇಲ್ಲಿಯ ಶರಣಪ್ಪ ಕುಂಬಾರ ಮಣ್ಣೆತ್ತಿನ ಅಮಾವಾಸ್ಯೆಗೆ ಮಣ್ಣೆತ್ತು, ದೀಪಾವಳಿಗೆ ದೀಪಗಳನ್ನು ಮಾಡುತ್ತಾರೆ. ಈಚೀನ ದಿನಗಳಲ್ಲಿ ಮನೆಗಳ ಬಳಸುವ ಒಲೆಗಳಿಗೆ ಸಂಪೂರ್ಣವಾಗಿ ಬೇಡಿಕೆ ಕುಸಿದಿದೆ. ಅನೇಕ ಕುಂಬಾರರದು ಕಣ್ಣಿರಿನ ಕಥೆಯಾದರೇ ಈ ಭಾಗದಲ್ಲಿರುವ ಹೆದ್ದಾರಿ ಪಕ್ಕದ ಡಾಭಾಗಳಿಗೆ ತಂದೂರಿ ಒಲೆ ಮಾಡಿಕೊಟ್ಟು ಜೀವನ ಸಾಗಿಸುತ್ತೇವೆ ಎಂದು ಜ್ಯೋತಿ ಕುಂಬಾರ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !