ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಸಂಶೋಧನೆಗಳು ರೈತರಿಗೆ ತಲುಪಿಸಿ: ಪೂಜಾರ

Published 2 ಜೂನ್ 2023, 14:46 IST
Last Updated 2 ಜೂನ್ 2023, 14:46 IST
ಅಕ್ಷರ ಗಾತ್ರ

ಬಾಗಲಕೋಟೆ: ವಿಶ್ವವಿದ್ಯಾಲಯಗಳ ಹೊಸ, ಹೊಸ ಸಂಶೋಧನೆಗಳನ್ನು ರೈತರಿಗೆ ತಲುಪಸಿವ ಕಾರ್ಯವನ್ನು ಕೃಷಿ ಡಿಪ್ಲೊಮಾ ಪಾಸಾದವರು ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆ ತೋವಿವಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ಡಿಪ್ಲೊಮಾ ಪ್ರಮಾಣ ಪತ್ರಗಳ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರೈತರಿಗೆ ಉತ್ತಮ ಮಾರ್ಗದರ್ಶನ ದೊರೆಯುವಂತಾಗಬೇಕು. ರೈತರು ಮಣ್ಣಿನ ಆರೋಗ್ಯ ಕಾಪಾಡಿ ವಿಷಮುಕ್ತ ಆಹಾರ ಉತ್ಪಾದನೆ ಮಾಡಬೇಕು ಎಂದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ರಾಜ್ಯ ನೋಡಲ್ ಅಧಿಕಾರಿ ಡಾ.ಎಂ.ಗೋಪಾಲ ಮಾತನಾಡಿ, ದೇಶದ ಕೃಷಿ ವಲಯವನ್ನು ಸದೃಢಗೊಳಿಸಬೇಕು. ಕೃಷಿ ಚಟುವಟಿಕೆಗಳಿಗೆ ನಿಮ್ಮನ್ನು ಅರ್ಪಿಸಿಕೊಳ್ಳಿರಿ ಎಂದು ಹೇಳಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ.ಎನ್.ಕೆ.ಹೆಗಡೆ ಮಾತನಾಡಿ, ಕೃಷಿ ಡಿಪ್ಲೊಮಾ ಸಂದರ್ಭದಲ್ಲಿ ಕಲಿತ ಹೊಸ ಸಂಶೋಧನೆಗಳನ್ನು ರೈತರಿಗೆ ಪರಿಚಯಿಸುವ ಮೂಲಕ ಹೊಸ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸಬೇಕು ಎಂದರು

ಪ್ರಥಮ ಸ್ಥಾನ ಪಡೆದ ಮಹೇಶ ಕೋಟಿ ಮತ್ತು ಜಯತೀರ್ಥ ದೇಸಾಯಿ ಅವರಿಗೆ ಬಂಗಾರದ ಪದಕ, ದ್ವಿತೀಯ ಸ್ಥಾನ ಪಡೆದ ಮಂಜುನಾಥ ಅಂಗಡಿ ಅವರಿಗೆ ಬೆಳ್ಳಿ ಪದಕ ಹಾಗೂ ತೃತೀಯ ಸ್ಥಾನ ಪಡೆದ ಪ್ರಕಾಶ ಅಂಗಡಿಗೆ ಕಂಚಿನ ಪದಕ ವಿತರಿಸಲಾಯಿತು.

ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಎಚ್.ಪಿ.ಮಹೇಶ್ವರಪ್ಪ, ಪ್ರಾಧ್ಯಾಪಕ ಡಾ.ವಸಂತ ಗಾಣಿಗೇರ, ಕೃಷಿ ಜಂಟಿ ನಿರ್ದೇಶಕ ಸದಾಶಿವ ಅಲ್ಲೂಳ್ಳಿ ಉಪಸ್ಥಿತರಿದ್ದರು. ತಾಂತ್ರಿಕ ಅಧಿಕಾರಿ ಡಾ.ಕಾಂತೇಶ ಗಾಂಡೋಳಕರ ಸ್ವಾಗತಿಸಿದರು. ಶ್ರೀಪಾದ ವಿಶ್ವೇಶ್ವರ ವಂದಿಸಿದರು. ಡಾ.ಎಸ್.ಎಂ. ಪ್ರಸನ್ನ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT