ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಫಾರ್‌ಗೆ ‘ಸೆವೆನ್‌ ಸ್ಟಾರ್‌’ ಪ್ರಶಸ್ತಿ

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್‌ ಎಸ್ಟೇಟ್‌ ವಲಯದ ಎಂಫಾರ್‌ ಡೆವಲಪರ್ಸ್‌ ಸಂಸ್ಥೆಗೆ ನಿರ್ಮಾಣ ಕ್ಷೇತ್ರದಲ್ಲಿನ ಸಾಧನೆಗಾಗಿ ‘ಕ್ರಿಸಿಲ್‌’ನ ‘ಸೆವೆನ್‌ ಸ್ಟಾರ್‌’ ಪ್ರಶಸ್ತಿ ಲಭಿಸಿದೆ.

ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕ್ರಿಸಿಲ್ ನಿರ್ದೇಶಕ ಸತೀಶ್ ರಾಮ್‍ಚಂದಾನಿ ಅವರು ಎಂಫಾರ್ ಸಂಸ್ಥೆಯ ಕಾರ್ಪೊರೇಟ್ ನಿರ್ವಹಣಾ ಘಟಕದ ಮುಖ್ಯಸ್ಥ ಶ್ಯಾಮ್ ದಾಮೋದರನ್ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿನ ‘ಗ್ರೀನ್‌ ಹಾರ್ಟ್‌ ಫೇಸ್‌–4’  ಯೋಜನೆಯಲ್ಲಿ ಬಳಸಿರುವ ಹೊಸ ವಿನ್ಯಾಸ, ಕಚೇರಿ ಕಟ್ಟಡದ ಮಾದರಿ, ವಾಹನ ನಿಲ್ದಾಣ, ಕೆಳ ಅಂತಸ್ತಿನ ವಾಹನ ನಿಲ್ದಾಣ ಕಾಮಗಾರಿಗಳಲ್ಲಿ ಪ್ರಮುಖವಾಗಿ ಸುರಕ್ಷತೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT