ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯದ ಕಾಳಜಿ ವಹಿಸಲು ಸಲಹೆ

Published 9 ಜೂನ್ 2023, 11:43 IST
Last Updated 9 ಜೂನ್ 2023, 11:43 IST
ಅಕ್ಷರ ಗಾತ್ರ

ಗುಳೇದಗುಡ್ಡ: ನರೇಗಾದಲ್ಲಿ ಕೆಲಸ ಮಾಡುವ ಕಾರ್ಮಿಕರು ಆರೋಗ್ಯದ ಕಡೆಗೆ ಹೆಚ್ಚು ಕಾಳಜಿ ವಹಿಸಬೇಕು. ಉತ್ತಮವಾದ ಆರೋಗ್ಯ ಇದ್ದಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹಂಸನೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಪ್ಪ ಕೇಸನೂರ ಹೇಳಿದರು.

ತಾಲ್ಲೂಕಿನ ಹಂಸನೂರು ಗ್ರಾಮದಲ್ಲಿ ನರೇಗಾ ಕೂಲಿ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕಾರ್ಮಿಕರಿಗೆ ಉಚಿತವಾಗಿ ಟಿಬಿ ಸ್ಕ್ರೀನಿಂಗ್ ಪರೀಕ್ಷೆ, ಬಿಪಿ, ಶುಗರ್, ರಕ್ತಹೀನತೆ ಸೇರಿದಂತೆ ವಿವಿಧ ತಪಾಸಣೆ ಮಾಡಲಾಯಿತು. 113 ಕಾರ್ಮಿಕರು ಪ್ರಯೋಜನ ಪಡೆದುಕೊಂಡರು.

ಸಮುದಾಯ ಆರೋಗ್ಯ ಅಧಿಕಾರಿ ವಿನೋದ, ವಿನೂತ ಗುರುಲಿಂಗಪ್ಪನವರ, ಅನ್ನಪೂರ್ಣ ಬಿಲಕಾರ, ಎಸ್.ಟಿ. ಪಟ್ಟಣದ, ಸಂಸ್ಥೆಯ ಸಂಯೋಜಕ ಶಿಲ್ಪ ಹಡಪದ ಹಾಗೂ ಲತಾ, ಐಸಿಟಿಸಿ ಯ ಆಪ್ತ ಸಮಾಲೋಚಕ ಜ್ಯೋತಿ ಮೆಣಸಗಿ, ಮಹಾಂತೇಶ, ಪಂಚಾಯಿತಿ  ಅಭಿವೃದ್ಧಿ ಅಧಿಕಾರಿ ಎಚ್.ಎಸ್. ಹಿರೇಗೌಡರ ಉಪಸ್ಥಿತರಿದ್ದರು.

ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸನೆ ಮಾಡುತ್ತಿರುವುದು.
ನರೇಗಾ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸನೆ ಮಾಡುತ್ತಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT