ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಳಗಿ: ಆಕರ್ಷಕ ಮತಗಟ್ಟೆಗಳ ಸ್ಥಾಪನೆ

ಕೆ.ಎಸ್.ಸೋಮನಕಟ್ಟಿ
Published 7 ಮೇ 2024, 5:19 IST
Last Updated 7 ಮೇ 2024, 5:19 IST
ಅಕ್ಷರ ಗಾತ್ರ

ಬೀಳಗಿ: ಪಟ್ಟಣದಲ್ಲಿ ಸ್ಥಾಪಿಸಿರುವ ಮತಗಟ್ಟೆಗಳು ಬಣ್ಣ ಬಣ್ಣದ ಚಿತ್ತಾರಗಳಿಂದ ಕಂಗೊಳಿಸುತ್ತಿವೆ. ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ, ತಾಲ್ಲೂಕು ಸ್ವೀಪ್ ಸಮಿತಿ ಮತ್ತು ಪಟ್ಟಣ ಪಂಚಾಯಿತಿ ಅವರು ಮತದಾರರನ್ನು ಆಕರ್ಷಿಸಲು ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಪಾರಂಪರಿಕ ವೃತ್ತಿ, ಸಾಂಸ್ಕೃತಿಕ ಕಲೆ ಹಾಗೂ ಸ್ಥಳೀಯರ ಅಭಿಲಾಷೆಯನ್ನು ಅರಿತು ಮತದಾನ ಕೇಂದ್ರಗಳನ್ನು ವಿಶೇಷ ಚಿತ್ತಾರಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ.

ಐತಿಹಾಸಿಕ ಮತಗಟ್ಟೆ: ಬೀಳಗಿ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 76 ರಿಂದ 81 ರವರೆಗೆ 6 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಐತಿಹಾಸಿಕ ವಿಷಯಗಳ ಕುರಿತು ಚಿತ್ರ ಬಿಡಿಸಲಾಗಿದೆ. ‘ತಪ್ಪದೇ ಮತದಾನ ಮಾಡಿ’, ‘ಮತದಾನ ಮಾಡುವುದು ನಿಮ್ಮ ಜವಾಬ್ದಾರಿ ಮತ್ತು ಹಕ್ಕು’, ‘ಯೋಚಿಸಿ ಮತದಾನ ಮಾಡಿ’ ಎಂಬ ಸಾಲುಗಳು ಮತದಾರರ ಹಕ್ಕು ಮತ್ತು ಜವಾಬ್ದಾರಿಯ ಅರಿವು ಮೂಡಿಸಲಿವೆ.

ಸಖಿ ಮತಗಟ್ಟೆ: ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 76ನ್ನು ಸಖಿ ಮತಗಟ್ಟೆಯಾಗಿ ರೂಪಿಸಲಾಗಿದೆ. ಸಂಪೂರ್ಣ ಮತಗಟ್ಟೆಯು ಗುಲಾಬಿ ಬಣ್ಣದ ಬಟ್ಟೆಯಿಂದ ಅಲಂಕಾರಗೊಂಡು ಕಂಗೊಳಿಸುತ್ತಿದೆ.

ಮತದಾನ ಕೇಂದ್ರಕ್ಕೆ ಮತದಾರರನ್ನು ಸೆಳೆಯಲು ಸಖಿ ಮತಗಟ್ಟೆ ಯುವ ಮತಗಟ್ಟೆ ಪಿಂಕ್ ಮತಗಟ್ಟೆ ಐತಿಹಾಸಿಕ ಮತಗಟ್ಟೆಗಳನ್ನು ಸ್ಥಾಪಿಸಿದ್ದೇವೆ. ಮತದಾರರು ತಪ್ಪದೇ ಮತಚಲಾಯಿಸಲಿ
ದೇವೇಂದ್ರ ಧನಪಾಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT