ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ: ಹೊಳಬಸು ಶೆಟ್ಟರ್‌ಗೆ ವಿಧಾನ ಪರಿಷತ್‌ಕ್ಕೆ ಅವಕಾಶ ನೀಡಲು ಮನವಿ

Published 27 ಮೇ 2024, 15:42 IST
Last Updated 27 ಮೇ 2024, 15:42 IST
ಅಕ್ಷರ ಗಾತ್ರ

ಗುಳೇದಗುಡ್ಡ: ಪಟ್ಟಣದ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ್‌ಗೆ ವಿಧಾನ ಪರಿಷತ್‍ಗೆ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಅಭಿಮಾನಿ ಬಳಗದ ವತಿಯಿಂದ ಸೋಮವಾರ ಬೆಂಗಳೂರಿನ ಮುಖ್ಯಮಂತ್ರಿ  ಕಚೇರಿ ಕೃಷ್ಣಾದಲ್ಲಿ ಗುಳೇದಗುಡ್ಡ, ಬಾದಾಮಿ, ಬಾಗಲಕೋಟೆಯಿಂದ ಸುಮಾರು ಎರಡು ಸಾವಿರ ಜನ ಅಭಿಮಾನಿ ಬಳಗದವರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಕಾರಾತ್ಮಕವಾಗಿ ಸ್ಪಂದಿಸಿ, ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಆಕಾಂಕ್ಷಿ ಹೊಳಬಸು ಶೆಟ್ಟರ್‌ ಮಾತನಾಡಿ’ ಅಭಿಮಾನಿ ಬಳಗ ಹಾಗೂ ಕಾರ್ಯಕರ್ತರ ಒತ್ತಾಸೆ ಮೇರೆಗೆ ವಿಧಾನ ಪರಿಷತ್‌ಗೆ ಸ್ಫಧಿಸಲು ಅವಕಾಶ ಕೋರಿ ಸಿದ್ದರಾಮಯ್ಯ ಅವರಿಗೆ ಮನವಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಮುಖಂಡರಾದ ಪಿ.ಆರ್.ಗೌಡರ,ಬಾದಾಮಿ ಮಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿಯಲಿಗಾರ, ಎಂ.ಬಿ.ಹಂಗರಗಿ, ವೀರೇಶ ಚಿಂದಿ, ಅಮಾತೆಪ್ಪ ಕೊಪ್ಪಳ, ಸಂಗಪ್ಪ ಜವಳಿ, ನಾಶಪ್ಪ ಪಾಗಿ, ರವಿ ಬಳಗೇರ ಹಾಗೂ ಕಾರ್ಯಕರ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT