ಬಾಗಲಕೋಟೆ: ನಗರದಲ್ಲಿ ಬಿದ್ದಿರುವಪ್ಲಾಸ್ಟಿಕ್ ಅನ್ನು ಆಯ್ದು ಸ್ವಚ್ಛಗೊಳಿಸಿ ಹೊಟೇಲ್ಗೆ ಬರುವವರಿಗೆಜಮಖಂಡಿಯ ಅನ್ನಪೂರ್ಣೇಶ್ವರಿ ಹೊಟೇಲ್ ಮಾಲೀಕ ಈರಯ್ಯ ಕಲ್ಯಾಣಿ ಉಚಿತವಾಗಿ ಊಟ ಹಾಕುತ್ತಾರೆ!

ಪರಿಸರಕ್ಕೆ ಮಾರಕ ಎನಿಸಿದ ಪ್ಲಾಸ್ಟಿಕ್ ಬಳಕೆಯನ್ನು ಕೇಂದ್ರ ಸರ್ಕಾರ ಅಕ್ಟೋಬರ್ 2ರಿಂದ ನಿಷೇಧಿಸಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈರಯ್ಯ ಪ್ಲಾಸ್ಟಿಕ್ ಆಯ್ದು ಸ್ವಚ್ಛಗೊಳಿಸಿದ ಚಿತ್ರದೊಂದಿಗೆ ಹೊಟೇಲ್ಗೆ ಬರುವವರಿಗೆ ಶನಿವಾರ ಹಾಗೂ ಭಾನುವಾರ (ಅಕ್ಟೋಬರ್ 19, 20) ಉಚಿತವಾಗಿ ಊಟ ನೀಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಸಮಾಜದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

'ಪ್ಲಾಸ್ಟಿಕ್ ಮಾರಕ ಎಂದು ಅರಿತು ಕೇಂದ್ರ ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದೆ. ಈ ವಿಚಾರದಲ್ಲಿ ನಾನು ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಒಂದು ಕೆ.ಜಿ ಪ್ಲಾಸ್ಟಿಕ್ ತನ್ನಿ, ಒಂದು ಊಟ ಉಚಿತವಾಗಿ ಪಡೆಯಿರಿ ಎಂಬ ವಿನೂತನ ಪ್ರಯೋಗ ಆರಂಭಿಸಿದೆ' ಎಂದು ಈರಯ್ಯ ಕಲ್ಯಾಣಿ ಹೇಳುತ್ತಾರೆ.

‘ನಮ್ಮ ಹೊಟೇಲ್ನಿಂದ ಊಟ ಪಾರ್ಸಲ್ ತೆಗೆದುಕೊಂಡು ಹೋಗುವವರಿಗಾಗಿ ಬಾಳೆ ಎಲೆಯಲ್ಲಿ ಊಟ ಕಟ್ಟಿ ಕೊಡುತ್ತಿದ್ದೇವೆ ಹಾಗೂ ಸಾಂಬರ್ನಂತಹ ಪದಾರ್ಥಗಳನ್ನು ರಟ್ಟಿನ ಡಬ್ಬದಲ್ಲಿ ಹಾಕಿ ಕೊಡಲಾಗುವುದು‘ ಎನ್ನುತ್ತಾರೆ.

‘ಜಮಖಂಡಿ ಸೇರಿದಂತೆ ಬೇರೆ ಬೇರೆ ಕಡೆ ನಮ್ಮ ಆರು ಹೊಟೇಲ್ಗಳಿವೆ. ನಗರದ ಅರ್ಬನ್ ಬ್ಯಾಂಕ್ನ ಎದುರಿನ ಹೊಟೇಲ್ನಲ್ಲಿ ಈ ಪ್ರಯೋಗ ಮಾಡಿದ್ದು, ಎರಡು ದಿನಗಳಲ್ಲಿ 10 ಕೆ.ಜಿಯಷ್ಟು ಪ್ಲಾಸ್ಟಿಕ್ ಸಂಗ್ರಹವಾಗಿದೆ. ಅದನ್ನು ನಗರಸಭೆ ಸುಪರ್ದಿಗೆ ಕೊಡಲಾಗಿದೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.