ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜೀವ್‌ ಗಾಂಧಿ ಕೊಡುಗೆ ಅನನ್ಯ: ಶಾಸಕ ಮೇಟಿ

Published 21 ಮೇ 2024, 14:13 IST
Last Updated 21 ಮೇ 2024, 14:13 IST
ಅಕ್ಷರ ಗಾತ್ರ

ಬಾಗಲಕೋಟೆ: ಸದೃಢ, ಸಶಕ್ತ, ಆಧುನಿಕ ಭಾರತ ನಿರ್ಮಾಣದ ಕನಸು ಕಂಡು, ಆ ದಿಕ್ಕಿನಲ್ಲಿ ದೇಶ ಮುನ್ನಡೆಸಿದ ವೈಜ್ಞಾನಿಕ, ವೈಚಾರಿಕತೆಯ ಚಿಂತನೆಯ ಅಪರೂಪದ ವ್ಯಕ್ತಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಕೊಡುಗೆಗಳು ಅನನ್ಯ ಎಂದು ಶಾಸಕ ಎಚ್.ವೈ. ಮೇಟಿ ಅಭಿಪ್ರಾಯಪಟ್ಟರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪುತ್ಥಳಿಗೆ ಮಂಗಳವಾರ ಗೌರವ ನಮನ ಸಲ್ಲಿಸಿ ಮಾತನಾಡಿದ ಅವರು, ನಂಬಿದ ಆದರ್ಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾನ್ ನಾಯಕ ಅವರು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಮಾತನಾಡಿ, ಸಂಪರ್ಕ ಕ್ರಾಂತಿ, ಕಂಪ್ಯೂಟರೀಕರಣ, ಪಂಚಾಯತ್ ರಾಜ್ ವ್ಯವಸ್ಥೆ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಿದ ಅವರು, ಮತದಾನ ಹಕ್ಕನ್ನು 18 ವರ್ಷಕ್ಕೆ ನಿಗದಿಪಡಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢಗೊಳಿಸಿದ ಕೀರ್ತಿ ಅವರದ್ದಾಗಿದೆ ಎಂದು ಹೇಳಿದರು.

ಸಂಪೂರ್ಣ ಸಾಕ್ಷರತಾ ಆಂದೋಲನ, ಪ್ರತಿಯೊಂದು ಜಿಲ್ಲೆಗೆ ನವೋದಯ ವಿದ್ಯಾ ಕೇಂದ್ರ ಜಾರಿಗೆ ತಂದರು ಎಂದರು.

ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ, ಎಸ್‌ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಎಸ್.ಎನ್‌. ರಾಂಪುರ, ಅಬ್ದುಲ್‌ ರಜಾಕ್ ಬೆಣೂರ, ಆನಂದ, ಕುತುಬುದ್ದೀನ್ ಖಾಜಿ, ಶ್ರೀನಿವಾಸ ಬಳ್ಳಾರಿ, ಗಣಪತ ದಾನಿ, ದ್ಯಾಮಣ್ಣ ಗಾಳಿ, ಹನಮಂತ ಗೊರವರ, ಅಜೇಯ ಕಪಾಟೆ, ಇಬ್ರಾಹೀಂ ಕಲಾದಗಿ, ಅಲ್ತಾಫ್ ಯಾದವಾಡ , ರೇಣುಕಾ ನ್ಯಾಮಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT