ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಒಳ ಪಂಗಡಗಳ ಸಭೆ ಜ.27ಕ್ಕೆ ದಾವಣಗೆರೆಯಲ್ಲಿ

‘ಪಂಚಸಂಗಮ ಸಭೆ’ಯಲ್ಲಿ ನಿರ್ಣಯ
Published 14 ಜನವರಿ 2024, 19:50 IST
Last Updated 14 ಜನವರಿ 2024, 19:50 IST
ಅಕ್ಷರ ಗಾತ್ರ

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ಲಿಂಗಾಯತ ಒಳ ಪಂಗಡಗಳ ದುಂಡು ಮೇಜಿನ ಪೂರ್ವಭಾವಿ ಸಭೆಯನ್ನು ಜನವರಿ 27 ಮತ್ತು 28 ರಂದು ದಾವಣಗೆರೆಯಲ್ಲಿ ನಡೆಸಲು ನಿರ್ಣಯಿಸಲಾಗಿದೆ.

ಪಂಚಮಸಾಲಿ ಪಾದಯಾತ್ರೆಯ ತೃತೀಯ ವರ್ಷಾಚರಣೆಯ ಅಂಗವಾಗಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಭಾನುವಾರ ನಡೆದ 2ಎ ಮೀಸಲಾತಿ ಚಳವಳಿಗಾರರ ‘ಪಂಚಸಂಗಮ ಸಭೆ’ಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಲೋಕಸಭಾ ಚುಣಾವಣೆ ಪೂರ್ವದಲ್ಲಿ ಬೆಂಗಳೂರು ಅಥವಾ ದಾವಣಗೆರೆಯಲ್ಲಿ ಸಮಾರಂಭ ಆಯೋಜಿಸಿ 10 ಲಕ್ಷ ಜನರ ಶಕ್ತಿ ಪ್ರದರ್ಶನ ಮಾಡುವುದು.  2ಎ ಮೀಸಲಾತಿಗಾಗಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕಾಂಗ್ರೆಸ್‌ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ನಿಯೋಗ ತೆಗೆದುಕೊಂಡು ಹೋಗುವ ಜವಾಬ್ದಾರಿಯನ್ನು ಶಾಸಕ ವಿನಯ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ, ಬಿ.ಆರ್.ಪಾಟೀಲ ಅವರಿಗೆ ನೀಡುವಂತೆ ನಿರ್ಣಯ ತೆಗೆದುಕೊಳ್ಳಲಾಗಿದೆ.

‘ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂದು ಸಚಿವ ಸಂಪುಟದಲ್ಲಿ ನಿರ್ಣಯಿಸಿ, ಸರ್ಕಾರ ಘೋಷಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿರುವುದಾಗಿ ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT