ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳೇದಗುಡ್ಡ | ಶ್ರಾವಣ ಮಾಸದ ಪುರಾಣ ಆರಂಭ

ಆ.17 ರಿಂದ 1 ತಿಂಗಳು ಪುರಾಣ
Published 22 ಜುಲೈ 2023, 13:29 IST
Last Updated 22 ಜುಲೈ 2023, 13:29 IST
ಅಕ್ಷರ ಗಾತ್ರ

ಗುಳೇದಗುಡ್ಡ: ಶ್ರೀ ಹೊಳೆ ಹುಚ್ಚೇಶ್ವರ ಮಠದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದ ಅಂಗವಾಗಿ ಆ.17 ರಿಂದ ಒಂದು ತಿಂಗಳು ಪುರಾಣ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀ ಹೊಳೆ ಹುಚ್ಚೆಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕೊಟೆಕಲ್ ಗ್ರಾಮದ ಶ್ರೀ ಹೊಳೆ ಹುಚ್ಚೇಶ್ವರ ಮಠದಲ್ಲಿ ಜರುಗಿದ ಪುರಾಣ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.

113 ವರ್ಷಗಳಿಂದ ನಿರಂತರವಾಗಿ ಪುರಾಣವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷದ ಪುರಾಣವನ್ನು ಚಿತ್ತರಗಿ ಶ್ರೀ ವಿಜಯಮಹಾಂತೇಶ್ವರ ಸ್ವಾಮೀಜಿ ಹೇಳುವರು ಎಂದರು. ಈ ಒಂದು ತಿಂಗಳು ಜರುಗುವ ಪುರಾಣ ಮಹೋತ್ಸವದಲ್ಲಿ ಗುಳೇದಗುಡ್ಡ,ಕೋಟೆಕಲ್ ಗ್ರಾಮದ ಹಿರಿಯರು, ಸಾರ್ವಜನಿಕರು ಸಕ್ರೀಯವಾಗಿ ಪಾಲ್ಗೊಳ್ಳಬೇಕೆಂದು ಭಕ್ತರ ಸಮ್ಮುಖದಲ್ಲಿ ಹೇಳಿದರು.

ಸಭೆಯಲ್ಲಿ ಭುಜಂಗರಾವ್ ದೇಸಾಯಿ, ಮಾಜಿ ಜಿ.ಪಂ ಉಪಾಧ್ಯಕ್ಷ ಹನಮಂತ ಮಾವಿನಮರದ, ಮಹಾಂತೇಶ ಕಡಪಟ್ಟಿ, ನೀಲಪ್ಪ ಅಬಕಾರಿ, ಹನಮಂತ ಕಡ್ಲಿಮಟ್ಟಿ, ಮೈಲಾರಲಿಂಗ ಆಲೂರ, ಗುರಪ್ಪ ತೊಗಲಂಗಿ, ಹುಚ್ಚಪ್ಪ ಮೇಟಿ, ಗುಂಡಪ್ಪ ಕೋಟಿ,ಹುಚ್ಚಪ್ಪ ಕಡಪಟ್ಟಿ, ಸಂಗಣ್ಣ ಪಟ್ಟಣಶೆಟ್ಟಿ, ಮುತ್ತು ಮೊರಬದ ಮುಂತಾದವರು ಪಾಲ್ಗೊಂಡಿದ್ದರು.

ಶ್ರೀ ಹೊಳೆ ಹುಚ್ಚೇಶ್ವರ ಮಠದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಶ್ರೀ ಹೊಳೆ ಹುಚ್ಚೇಶ್ವರ ಮಠದಲ್ಲಿ ಪೂರ್ವಭಾವಿ ಸಭೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT