ಕುಳಗೇರಿ ಕ್ರಾಸ್: ಜವಾಹರ ನವೋದಯ ವಿದ್ಯಾಲಯದ 95 ವಿದ್ಯಾರ್ಥಿಗಳಿಗೆ ವೈರಲ್ ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಕೊಡಿಸಲಾಗಿದೆ. ಜ್ವರ ತೀವ್ರ ಇರುವವರನ್ನು ಪಾಲಕರೊಂದಿಗೆ ಮನೆಗೆ ಕಳುಹಿಸಲಾಗಿದೆ.

ಬುಧವಾರ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರಡ್ಡಿ ಡಿಎಚ್ಒ ಹಾಗೂ ಟಿಎಚ್ಒ ಅವರ ತಂಡದೊಂದಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಫೆ.28 ರಿಂದ ಮಾರ್ಚ್ 4ರವರೆಗೆ 46 ಬಾಲಕರಿಗೆ ಹಾಗೂ 49 ಬಾಲಕಿಯರಿಗೆ ಕೆಮ್ಮು, ನೆಗಡಿ, ಜ್ವರ ಹಾಗೂ ತಲೆ ಸುತ್ತುವ ಲಕ್ಷಣಗಳು ಕಂಡು ಬಂದಿವೆ.

ಮಕ್ಕಳ ತಜ್ಞರಾದ ಡಾ. ಕಿರಣಕುಮಾರ ಕುಳಗೇರಿ ಮಕ್ಕಳ ತಪಾಸಣೆ ಮಾಡಿದರು. ಮಾರ್ಚ್ 9ರವರೆಗೆ ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವಂತೆ ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಪ್ರಭಾರ ಪ್ರಾಚಾರ್ಯ ಎಸ್.ಎಸ್. ಆಸ್ಸಾರಿ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.