ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ‘ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಮಿದುಳು ಹಾಗೂ ಹೃದಯದಲ್ಲಿ ತುಂಬಿಕೊಂಡಿರುವ ಮಲವನ್ನು ಸ್ವಚ್ಛಗೊಳಿಸ
ಬೇಕು’ ಎಂದು ಆಗ್ರಹಿಸಿ, ವಿವಿಧ ದಲಿತಪರ ಸಂಘಟನೆಗಳ ಸದಸ್ಯರು ಸೋಮವಾರ ಕೇಂದ್ರ ಸರ್ಕಾರಕ್ಕೆ ಫಿನಾಯಿಲ್ ಹಾಗೂ ಪೊರಕೆಗಳನ್ನು ರವಾನಿಸಿದರು.

ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿದ ಡಾ. ಬಿ.ಆರ್. ಅಂಬೇಡ್ಕರ್ ಯುವ ಸೇನೆ, ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು, ‘ಸಂವಿಧಾನ ಹಾಗೂ ದಲಿತರ ಬಗ್ಗೆ ಸಚಿವ ಹೆಗಡೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಕೋಮುಗಲಭೆ ಸೃಷ್ಟಿಸುವುದು ಅವರ ಮೂಲ ಉದ್ದೇಶವಾಗಿದೆ’ ಎಂದರು.

‘ಈ ದೇಶವನ್ನು ಸ್ವಚ್ಛ ಮಾಡುವವರು ದಲಿತ ಪೌರ ಕಾರ್ಮಿಕರು. ಮೂರು ತಿಂಗಳಾದರೂ ಸಂಬಳ ಸಿಗದೆ ಅವರು ಪರದಾಡುವ ಸ್ಥಿತಿಯಲ್ಲಿದ್ದಾರೆ. ಆದರೆ, ಈಗ ನಿಜವಾಗಿ ಸ್ವಚ್ಛಗೊಳಿಸಬೇಕಾಗಿರುವುದು ಮನುಸಂಸ್ಕೃತಿಯನ್ನು ಜಪಿಸುತ್ತ, ಅಸ್ಪೃಶ್ಯತೆಯನ್ನು ಜೀವಂತ ಇಡುತ್ತಿರುವವರ ನಾಲಿಗೆ ಹಾಗೂ ಹೃದಯವನ್ನು’ ಎಂದು ಅಂಬೇಡ್ಕರ್ ಯುವ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಪಿ. ಸಂತೋಷ್ ಕಿಡಿ ಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.