ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು: ಕ್ಷಯರೋಗಿಗಳಿಗೆ ಆಹಾರ ಕಿಟ್ ವಿತರಣೆ

Published 17 ಡಿಸೆಂಬರ್ 2023, 14:06 IST
Last Updated 17 ಡಿಸೆಂಬರ್ 2023, 14:06 IST
ಅಕ್ಷರ ಗಾತ್ರ

ಸಂಡೂರು: ಜಿಂದಾಲ್ ಫೌಂಡೇಷನ್ ವತಿಯಿಂದ ಶನಿವಾರ ಪಟ್ಟಣದ ಗುರುಭವನದಲ್ಲಿ ನಿ-ಕ್ಷಯ ಮಿತ್ರ ಯೋಜನೆಯಡಿ ಕ್ಷಯರೋಗಿಗಳಿಗೆ ಆಹಾರದ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜಿಂದಾಲ್ ಫೌಂಡೇಷನ್ ಉಪಾಧ್ಯಕ್ಷ ಸುನಿಲ್ ರಾಲ್ಟ್ ಮಾತನಾಡಿ, ‘ಕ್ಷಯರೋಗ ಮುಕ್ತ ಬಳ್ಳಾರಿ ಮಾಡಲು ಫೌಂಡೇಷನ್ ವತಿಯಿಂದ ಸಹಕಾರ ನೀಡಲು ಸಿದ್ಧ. ಜಿಲ್ಲೆಯ ಎಲ್ಲಾ ರೋಗಿಗಳನ್ನು ದತ್ತು ತೆಗೆದುಕೊಂಡು ರೋಗಿಗಳಿಗೆ ಆರು ತಿಂಗಳ ಕಾಲ ಕಿಟ್ ನೀಡಲು ಸಂಸ್ಥೆ ಮುಂದಾಗಿದೆ’ ಎಂದರು.

ರಾಜ್ಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಉಪ ನಿರ್ದೇಶಕ ಡಾ.ಅನಿಲ್ , ಡಾ.ಇಂದ್ರಾಣಿ, ಕಂಪೆನಿಯ ಸಿಎಸ್ಆರ್ ಮುಖ್ಯಸ್ಥ ಪೆದ್ದನ್ನ, ಪ್ರಕಾಶ್, ರಾಜೇಂದ್ರ, ಡಬ್ಲ್ಯೂ. ಎಚ್.ಓ ಕನ್ಸಲ್ಟಂಟ್ ಡಾ.ಹಂಸವೇಣಿ ಮಾತನಾಡಿದರು.

ಡಾ.ಸಂಗೀತಾ, ಪ್ರಭಾರಿ ತಾಲ್ಲೂಕು ಆರೋಗ್ಯಾಧಿಕಾರಿ ಭರತ್ ಕುಮಾರ್, ಡಾ.ಅಕ್ಷಯ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಜಿಲ್ಲಾ ಟಿ.ಬಿ ಘಟಕದ ಗಿರೀಶ್ ಕುಮಾರ್, ಉದಯ್ ಕುಮಾರ್, ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT