ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಜೆಎಂ ಯೋಜನೆ ಕಾಮಗಾರಿಗೆ ಚಾಲನೆ

Published 24 ಜನವರಿ 2024, 13:09 IST
Last Updated 24 ಜನವರಿ 2024, 13:09 IST
ಅಕ್ಷರ ಗಾತ್ರ

ಕಂಪ್ಲಿ: ತಾಲ್ಲೂಕಿನ ಸಣಾಪುರ ಮತ್ತು ದೇವಲಾಪುರ ಗ್ರಾಮದಲ್ಲಿ ₹6.70ಕೋಟಿ ವೆಚ್ಚದ ಜೆಜೆಎಂ ಯೋಜನೆ, ಕೆರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜೆ.ಎನ್.ಗಣೇಶ್ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಗ್ರಾಮ ಪಂಚಾಯಿತಿ ಸದಸ್ಯ ಸಣ್ಣ ಬಾಲೇಸಾಬ್ ಮಾತನಾಡಿ, ಇಟಗಿ ಗ್ರಾಮಸ್ಥರಿಗೆ ಸಮರ್ಪಕ ನೀರು ಪೂರೈಕೆಗಾಗಿ ನೂತನ ಮೇಲ್ತೊಟ್ಟಿ ನಿರ್ಮಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಸಣಾಪುರ ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸುವಂತೆ ಗ್ರಾಮದ ವಿ.ತಿಲಕ್, ಮಂಜುನಾಥ ಇತರರು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷ ವೈ. ರಮಣಯ್ಯ, ಸದಸ್ಯರಾದ ಸಾವಿತ್ರಮ್ಮ, ವೀರಯ್ಯ, ಪಿಡಿಒ ಹಾಲರವಿ ಶೇಷಗಿರಿ, ಮುಖಂಡರಾದ ರಾಜಕುಮಾರ್ ಪಾಟೀಲ್, ವೀರೇಶಪ್ಪ, ಜಿ.ಈಶಣ್ಣ, ಕೆ.ಎಸ್.ಬಸವರಾಜ, ರಘುರಾಮ್ ಸಿ., ಹನುಮಂತಪ್ಪ, ಆಂಜನೇಯ, ಅಚ್ಯುತ, ಪ್ರಕಾಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT