ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಧವಾ ವಿವಾಹ ಹೆಣ್ಣಿನ ಸ್ವತಂತ್ರ ಆಯ್ಕೆಯಾಗಲಿ’

Last Updated 7 ನವೆಂಬರ್ 2022, 12:45 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ವಿಧವಾ ವಿವಾಹ ಸಮಾಜ ಮತ್ತು ಸಂಪ್ರದಾಯದ ಒತ್ತಡದಿಂದಾಗದೇ ಅದು ಹೆಣ್ಣಿನ ಸ್ವತಂತ್ರ ಆಯ್ಕೆಯಾಗಬೇಕು’ ಎಂದು ಸಂಶೋಧಕ ಸೈಯದ್‌ ಬಿ. ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಿಂದ ಸೋಮವಾರ ವಿ.ವಿ.ಯಲ್ಲಿ ಏರ್ಪಡಿಸಿದ್ದ ಲಿಂಗಸೂರು ವಿಠಲರಾವ್‌ ಅನುವಾದಿಸಿರುವ ‘ಒಂದು ಮಲಿನ ಚಾದರ‘ ಕಾದಂಬರಿ ಕುರಿತು ಉಪನ್ಯಾಸ ನೀಡಿದರು.

‘ಪ್ರಕೃತಿಯಲ್ಲಿ ಲೈಂಗಿಕತೆ, ಆಕರ್ಷಣೆ ಗಂಡು-ಹೆಣ್ಣು ಎಂಬುದರ ಮೇಲೆ ನಿರ್ಧಾರವಾಗಿದೆ. ಆದರೆ, ಮನುಷ್ಯ ನಿರ್ಮಿಸಿಕೊಂಡಿರುವ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಭಾವನಾತ್ಮಕ ಮತ್ತು ಭಾವನಾತ್ಮಕ ರಕ್ತ ಸಂಬಂಧಗಳ ಮೇಲೆ ಲೈಂಗಿಕತೆ ಮತ್ತು ಆಕರ್ಷಣೆ ನಿರ್ಧಾರವಾಗುತ್ತದೆ’ ಎಂದರು.

ಮನುಷ್ಯ ನಿರ್ಮಿಸಿಕೊಂಡಿರುವ ವ್ಯವಸ್ಥೆಯಲ್ಲಿ ಅಲ್ಪಸಲ್ಪ ಮಾರ್ಪಾಡುಗಳಾದರೂ ಅದು ಮಾನಸಿಕ ಸಂಘರ್ಷಕ್ಕೆ ಏಡೆ ಮಾಡಿಕೊಡುತ್ತದೆ ಎಂದು ಹೇಳಿದರು.

ವಿಭಾಗದ ಮುಖ್ಯಸ್ಥ ಎ. ಮೋಹನ ಕುಂಟಾರ್, ರೆಬೆಕ್ಕ, ವೇದಿಕೆ ಸಂಚಾಲಕ ಕೆ. ಅನಂತ, ಸಂಶೋಧಕ ನಾಯಕರ ಜಯಮ್ಮ, ಸಂಗೀತ ವಿಭಾಗದ ಜ್ಯೋತಿ, ವಿನೀತಾ ಜೆ.ಎಂ, ಶ್ವೇತಾ ಬಾಳಿ, ಶಶಿಕುಮಾರ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT