ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಡೂರು: ನೂತನ ಬಸ್‌ಗಳಿಗೆ ಚಾಲನೆ

Published 8 ಮಾರ್ಚ್ 2024, 16:30 IST
Last Updated 8 ಮಾರ್ಚ್ 2024, 16:30 IST
ಅಕ್ಷರ ಗಾತ್ರ

ಸಂಡೂರು: ಸಂಡೂರು ಡಿಪೋದ 10 ನೂತನ ಬಸ್‌ಗಳಿಗೆ ಪುರಸಭೆ ಬಸ್ ನಿಲ್ದಾಣದ ಆವರಣದಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್ ಶುಕ್ರವಾರ ಚಾಲನೆ ನೀಡಿದರು.

ಘಟಕ ವ್ಯವಸ್ಥಾಪಕ ಶಂಕರ್ ಬಿ.ಕೆ ಮಾತನಾಡಿ, ಕೆಕೆಆರ್‌ಡಿಬಿಯ ₹4 ಕೋಟಿ ಅನುದಾನದಲ್ಲಿ 10 ಬಸ್ ಖರೀದಿಸಲಾಗಿದೆ. ಸಂಡೂರಿನಿಂದ ಹೊಸಪೇಟೆ, ಕೂಡ್ಲಿಗಿ ಹಾಗೂ ಬಳ್ಳಾರಿಗೆ ಹಾಗೂ ಆದ್ಯತೆ ಮೇರೆಗೆ ಹಳ್ಳಿಗಳಿಗೆ ಬಸ್‌ಗಳು ಸಂಚರಿಸಲಿವೆ ಎಂದು ತಿಳಿಸಿದರು.

ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ಬಾನ್, ವಿಭಾಗೀಯ ಸಂಚಾರ ಅಧಿಕಾರಿ ಚಾಮರಾಜ್, ಸಿಪಿಐ ಮಹೇಶ್ ಗೌಡ, ಶಾಸಕರ‌ ಆಪ್ತ ಕಾರ್ಯದರ್ಶಿಗಳಾದ ಆರ್.ಧನಂಜಯ, ಶ್ರೀಕಂಠ ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷೆ ಆಶಾಲತಾ ಸೋಮಪ್ಪ, ಸದಸ್ಯರಾದ ಶಿವಕುಮಾರ್, ಅಶೋಕ್, ಮುಖಂಡರಾದ ಕೆ.ಸತ್ಯಪ್ಪ, ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT