ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೇವಸ್ಥಾನದಲ್ಲಿ ಕಳವು: ಇಬ್ಬರು ಅರೋಪಿಗಳ ಬಂಧನ

Published 29 ಡಿಸೆಂಬರ್ 2023, 12:57 IST
Last Updated 29 ಡಿಸೆಂಬರ್ 2023, 12:57 IST
ಅಕ್ಷರ ಗಾತ್ರ

ಕಾನಹೊಸಹಳ್ಳಿ: ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯ ಹುರುಳಿಹಾಳ್ ಮತ್ತು ಬಣವಿಕಲ್ಲು ಗ್ರಾಮಗಳ ದೇವಸ್ಥಾನದಲ್ಲಿ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾನಹೊಸಹಳ್ಳಿ ಪೊಲೀಸರು ಗುರುವಾರ ಯಶಸ್ಸಿಯಾಗಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಹುರುಳಿಹಾಳ್ ಮತ್ತು ಬಣವಿಕಲ್ಲು ಗ್ರಾಮಗಳ ದೇವಸ್ಥಾನದಲ್ಲಿ ಕಳವಾಗಿರುವ ಬಗ್ಗೆ ಠಾಣೆಯಲ್ಲಿ ಗ್ರಾಮಸ್ಥರು ದೂರು ನೀಡಿದ್ದರು.

ಆರೋಪಿಗಳ ಪತ್ತೆಗಾಗಿ ವಿಜಯನಗರ ಜಿಲ್ಲೆಯ ಎಸ್‌ಪಿ, ಕೂಡ್ಲಿಗಿ ಡಿವೈಎಸ್ಪಿ, ಕೊಟ್ಟೂರು ವೃತ್ತ ಸಿಪಿಐ ವೆಂಕಟಸ್ವಾಮಿ ಮಾರ್ಗದರ್ಶನದಲ್ಲಿ ಕಾನಹೊಸಹಳ್ಳಿ ಠಾಣಾ ಪಿಎಸ್ಐ ಎರಿಯಪ್ಪ ಅಂಗಡಿ, ಅಪರಾದ ವಿಭಾಗದ ಪಿಎಸ್ಐ ಎಚ್.ನಾಗರತ್ನಾ ನೇತೃತ್ವದ ತನಿಖಾ ತಂಡ ನೇಮಿಸಿ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಿದ್ದರು.

ಈ ಸಂಬಂಧ ಅಂಧ್ರಪದೇಶ ರಾಜ್ಯ ಅನಂತಪುರ ಜಿಲ್ಲೆಯ ಅಭಿಷೇಕ ಮತ್ತು ಕೊಟ್ಟೂರಿನ ಹನುಮಂತ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ ₹50 ಸಾವಿರ ನಗದು, ₹10ಸಾವಿರ ಮೌಲ್ಯದ ಪೂಜಾ ಸಾಮಾಗ್ರಿ, ₹1 ಲಕ್ಷ ಮೌಲ್ಯದ ಅಪೇ ಆಟೊ, ₹1ಲಕ್ಷ ಮೌಲ್ಯದ ಬೈಕ್ ಸೇರಿ ಒಟ್ಟು ₹2.60 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT