ಸಂಡೂರು: ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಒಳ ಚರಂಡಿಗಳನ್ನು ಸ್ವಚ್ಛವಾಗಿಡಲು ಮತ್ತು ಬೀದಿ ದೀಪಗಳ ಸಮರ್ಪಕ ನಿರ್ವಹಣೆ, ಉದ್ಯಾನವನಗಳನ್ನು ಸರಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಸದಸ್ಯರು ಮಂಗಳವಾರ ಪುರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಮಯಕ್ಕೆ ಸರಿಯಾಗಿ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಒಳ ಚರಂಡಿಗಳ ಮೂಲಕ ಹಾದು ಹೋಗಿರುವ ಪೈಪ್‌ಗಳು ಒಡೆದು ಹೋಗಿವೆ. ಇದೇ ನೀರನ್ನು ಉಪಯೋಗಿ ಸುತ್ತಿರುವ ಜನರು ಹಲವು ರೀತಿಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರು ತಿಳಿಸಿದರು.

ಬೀದಿ ದೀಪಗಳ ಸರಿಯಾದ ನಿರ್ವಹಣೆ ಇಲ್ಲದೆ ರಾತ್ರಿ ವೇಳೆಯಲ್ಲಿ ಟ್ಯೂಷನ್‌ಗೆ ಹೋಗಿಬರುವ ಮಕ್ಕಳು ಹಾಗೂ ಮುದುಕರು ತೊಂದರೆ ಪಡು ತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಉದ್ಯಾನ ವನಗಳು ಹೆಸರಿಗೆ ಮಾತ್ರ ಇವೆ ಎನ್ನುವಂತಾಗಿದೆ. ಸ್ವಚ್ಛತೆ ಮಾಯವಾಗಿದ್ದು ಮಕ್ಕಳು ರಜೆ ದಿನಗಳಲ್ಲಿ ಅಲ್ಲಿಗೆ ಹೆಚ್ಚಾಗಿ ಆಟವಾಡು ವಂತೆ ಮಾಡುವ ಕೆಲಸವನ್ನು ಪುರಸಭೆ ಯವರು ಮಾಡಬೇಕಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಕುಮಾರಸ್ವಾಮಿ, ದಾದಾ ಪೀರ್, ಮಂಜುನಾಥ್, ಕೆ.ಆರ್. ಕುಮಾರ್‌ಸ್ವಾಮಿ, ರವಿಕುಮಾರ್, ಅಂಜಿನಪ್ಪ, ವರಲಕ್ಷ್ಮೀ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.