ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ (ಎ.ಎಸ್.ಐ.) ಮಾರ್ಚ್ನಲ್ಲಿ ಕಾಂಪೌಂಡ್ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳಲಾಗಿತ್ತು. ಈ ವೇಳೆ ನೆಲ ಅಗೆಯುತ್ತಿದ್ದಾಗ ಕುಡಿಯುವ ನೀರಿನ ವ್ಯವಸ್ಥೆಗಾಗಿ ಸಂಪರ್ಕ ಕಲ್ಪಿಸಿದ್ದ ಪೈಪ್ಗಳು ಪತ್ತೆಯಾಗಿದ್ದವು. ಎರಡೂವರೆಯಿಂದ ಮೂರು ಅಡಿ ನೆಲದಾಳದಲ್ಲಿ ಹಾಗೂ ಅದರ ಮೇಲ್ಭಾಗದಲ್ಲಿ ಇನ್ನೊಂದು ಪೈಪ್ಲೈನ್ ಇದೆ. 4X4 ಅಡಿ ಆಳ, ಅಗಲದ ತೊಟ್ಟಿ ಕೂಡ ಈ ವೇಳೆ ಸಿಕ್ಕಿದೆ. ತೊಟ್ಟಿಗೆ ಒಂದು ಕಡೆ ನೀರಿನ ಸಂಪರ್ಕ ಕಲ್ಪಿಸಿದರೆ, ಅದರಿಂದ ಬೇರೆ ಬೇರೆ ಕಡೆ ನೀರು ಹರಿದು ಹೋಗಲು ಮೂರು ಕಡೆಗಳಲ್ಲಿ ಪೈಪ್ಲೈನ್ ಸಂಪರ್ಕ ಕಲ್ಪಿಸಲಾಗಿದೆ.