ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್–1ರ ಆಗಮನ ದ್ವಾರದ ಪಿಕಪ್ ಪ್ರದೇಶದಲ್ಲಿ ವಾಣಿಜ್ಯ ವಾಹನ ಹಾಗೂ ಟ್ಯಾಕ್ಸಿಗಳಿಗೆ ಇದುವರೆಗೆ ನಿಗದಿಪಡಿಸಲಾಗಿದ್ದ 10 ನಿಮಿಷಗಳ ಉಚಿತ ಪಾರ್ಕಿಂಗ್ ಅವಧಿಯನ್ನು 15 ನಿಮಿಷಕ್ಕೆ ವಿಸ್ತರಿಸಲಾಗಿದೆ.

ಈ ಸೌಲಭ್ಯವು ಟರ್ಮಿನಲ್–1ರ ಆಗಮನ ದ್ವಾರದ ಪಿಕಪ್ ವಲಯದಲ್ಲಿ ಕಾರ್ಯಾಚರಣೆಯಲ್ಲಿ ತೊಡಗುವ ಎಲ್ಲಾ ವಾಣಿಜ್ಯ ವಾಹನಗಳಿಗೆ ಅನ್ವಯವಾಗಲಿದೆ ಎಂದು ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆಯಾದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಬಿಐಎಎಲ್) ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣಿಕರು, ಟ್ಯಾಕ್ಸಿ ಚಾಲಕರು ಹಾಗೂ ಇತರ ಪ್ರಯಾಣಿಕರ ಪ್ರತಿಕ್ರಿಯೆಗಳನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಯಾಣಿಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಬಿಐಎಎಲ್ ಸ್ಪಷ್ಟಪಡಿಸಿದೆ.

ಡಿ.13ರಂದು ಟರ್ಮಿನಲ್–1ರಲ್ಲಿ ಜಾರಿಗೆ ತರಲಾದ ಹೊಸ ಪಿಕಪ್ ನಿಯಮಗಳ ಪ್ರಕಾರ, ವಾಣಿಜ್ಯ ವಾಹನಗಳು ಪಿ–3 ಮತ್ತು ಪಿ–4 ಎಂದು ಗುರುತಿಸಲಾದ ಪಾರ್ಕಿಂಗ್ ವಲಯಗಳಲ್ಲಿ ಕಾಯಬೇಕಿತ್ತು. ಅಲ್ಲಿ 10 ನಿಮಿಷಗಳ ಉಚಿತ ಪಾರ್ಕಿಂಗ್ ಸೌಲಭ್ಯ ನೀಡಲಾಗುತ್ತಿತ್ತು. ಇದೀಗ ಅದನ್ನು 15 ನಿಮಿಷಗಳಿಗೆ ವಿಸ್ತರಿಸಲಾಗಿದೆ.

ಉಚಿತ ಅವಧಿ ಮೀರಿದ ಬಳಿಕ, ಕ್ಯಾಬ್ ಚಾಲಕರು ಮೊದಲ ಅರ್ಧ ಗಂಟೆಗೆ ಫ್ಲಾಟ್ ದರವಾಗಿ ₹100 ಪಾವತಿಸಬೇಕಾಗಿದ್ದು, ನಂತರ ಪ್ರತಿ ಹೆಚ್ಚುವರಿ ಗಂಟೆಗೆ ₹50 ಶುಲ್ಕ ವಿಧಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.