ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಜಾಟದಲ್ಲಿ ಕಲೆ ಮರೆ : ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ವಿಷಾದ

Last Updated 30 ನವೆಂಬರ್ 2020, 1:47 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಜನಪದ ಕಾರ್ಯಕ್ರಮಗಳಿಗೆ ಹಳ್ಳಿಗಾಡಿನಲ್ಲಿರುವ ಆಸಕ್ತಿ ನಗರ ಪ್ರದೇಶಗಳಲ್ಲಿ ಇಲ್ಲವಾಗುತ್ತಿದೆ. ಜನಪದ ಉಳಿವಿಗೆ ನಗರ ಪ್ರದೇಶದಿಂದಲೂ ಪ್ರೋತ್ಸಾಹ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯ ಹೇಳಿದರು.

ನಗರದ ಡಾ.ರಾಜ್‌ಕುಮಾರ್ ಕಲಾ ಮಂದಿರದಲ್ಲಿ ಭಾನುವಾರ ಕೇಂದ್ರ ಸಂಸ್ಕೃತಿ ಇಲಾಖೆ, ಜಾನಪದ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ನಡೆದ ಕಲಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಧಾರಾವಾಹಿ, ಸಿನಿಮಾದಂತಹ ದೃಶ್ಯ ಮಾಧ್ಯಮಗಳಿಂದ ನಾಟಕ ಮತ್ತು ಇನ್ನಿತರ ಜನಪದ ಕಲೆಗಳು ಅಳಿವಿನಂಚಿನಲ್ಲಿವೆ. ಕಲೆಗೆ ಬೆಲೆ ಕೊಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಬೇಕು ಎಂದರು.

ಕಲಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ದೇಶದ ಸಾಂಸ್ಕೃತಿಕ ಮತ್ತು ವಿವಿಧ ರೀತಿ ಕಲೆ ಪ್ರಪಂಚದಾದ್ಯಂತ ಹೆಸರು ಗಳಿಸಿದೆ. ಸಾಂಸ್ಕೃತಿಕ ಮತ್ತು ಜಾನಪದ ಕಲೆಗಳನ್ನು ಪ್ರೋತ್ಸಾಹಿಸಿ ಕಲೆ ಉಳಿವಿಗಾಗಿ ಶ್ರಮಿಸಬೇಕು. ರಾಜಕೀಯ ಜಂಜಾಟದಲ್ಲಿ ಕಲೆ ಮರೆಯಾಗುತ್ತಿದೆ. ಕಲೆ ಎಂಬುದು ವ್ಯಸನ, ಬಡತನ, ನೋವು ಮರೆಸುವ ಔಷಧ. ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನಗಳು ಮರೆಯಾಗು ತ್ತಿರುವುದು ಬೇಸರದ ಸಂಗತಿ ಎಂದರು.

ಕಲಾ ಮಹೋತ್ಸವ ಅಂಗವಾಗಿ ಜಾನಪದ ಗೀತೆಗಳು, ಡೊಳ್ಳುಕುಣಿತ, ಯಕ್ಷಗಾನ, ಏಕ ಪಾತ್ರಾಭಿನಯ, ಜನಪದ ಕೋಲಾಟ, ಭರತನಾಟ್ಯ, ವೀರಗಾಸೆ, ತಮಟೆ ವಾದನ, ಹಗಲು ವೇಷ, ಸಾಮಾಜಿಕ ನಾಟಕ, ಜಾನಪದ ನೃತ್ಯ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಕಾರ್ಯಕ್ರಮದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ, ಬಿಜೆಪಿ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಎಸ್.ಶಿವಶಂಕರ್, ಚಾಲೆಂಜರ್ ಯೂಥ್ ಫೋರಂ ಸಂಸ್ಥಾಪಕ ಡಾ.ಸುನಿಲ್‌ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಚನ್ನಮ್ಮ ರಾಮಲಿಂಗಯ್ಯ, ಪ್ರಾಂಶುಪಾಲ ಡಾ.ಎಂ.ಸುಬ್ರಮಣ್ಯ, ನಿವೃತ್ತ ಜಂಟಿ ನಿರ್ದೇಶಕ ಎಸ್ ನಾರಾಯಣಪ್ಪ, ಮುಖಂಡರಾದ ಡಾ.ಬಂಡ್ಲಹಳ್ಳಿ ವಿಜಯ್‌ಕುಮಾರ್, ಕೆ.ನಾಗರತ್ನಮ್ಮ, ರಾಮಚಂದ್ರ ಶ್ಯಾಕಲದೇವನಪುರ, ಸಿದ್ದಯ್ಯ ಚಿಕ್ಕಮಾರನಹಳ್ಳಿ, ಕೃಷ್ಣಪ್ಪ ಕುಕ್ಕನಹಳ್ಳಿ, ಗಾಯಕಿ ಅಶ್ವಿನಿ ಯಲಹಂಕ, ಜಾನಪದ ಕಲಾವಿದೆ ನಿರ್ಮಲ ರವಿಶಾತ್ರಿ, ಜ್ಯೋತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT