ಹೊಸಕೋಟೆ: ಸ್ವಾತಂತ್ರ್ಯಪೂರ್ವ ಮತ್ತು ನಂತರ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳು ನೀಡಿರುವ ಕೊಡುಗೆ ಗಣನೀಯ ಎಂದು ಹಿರಿಯ ಪಾಸ್ಟರ್ ರಮೇಶ್ ಹೇಳಿದರು.

ನಗರದ ಅಭಿಷೇಕ ಪ್ರಾರ್ಥನ ಮಂದಿರದಲ್ಲಿ ನಡೆದ ಹೊಸಕೋಟೆ ಸಭಾಪಾಲಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಉಚಿತ ಶಿಕ್ಷಣ, ಆರೋಗ್ಯ, ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳ ಮೂಲಕ ಮಿಷನರಿಗಳು ಸೇವಾ ಮನೋಭಾವ ಮೂಡಿಸುತ್ತಿವೆ ಎಂದರು.

ಆದರೆ, ಇತ್ತೀಚಿನ ದಿನಗಳಲ್ಲಿ ಕ್ರೈಸ್ತ ಸಮುದಾಯದಿಂದ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಆಯ್ಕೆ ಕಡಿಮೆಯಾಗುತ್ತಿದೆ ಎಂದು ಗಮನ ಸೆಳೆದರು. ಯುವಕ-ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ ಉನ್ನತ ಹುದ್ದೆ ಗಳಿಸಲು ಪ್ರೇರೇಪಿಸಬೇಕು ಎಂದು ಮನವಿ ಮಾಡಿದರು.

ಹೊಸಕೋಟೆ, ಕೋಲಾರ, ಬಂಗಾರಪೇಟೆ, ಚಿಕ್ಕಬಳ್ಳಾಪುರ ಭಾಗಗಳಿಂದ ಹೆಚ್ಚಿನ ಸೇವಕರು ಬರಬೇಕು. 'ಕ್ರಿಸ್ತನ ಸೇವಕರು' ಎಂಬ ಭಾವನೆಯಿಂದ ಒಗ್ಗಟ್ಟಾಗಿ ಬಾಳಬೇಕೆಂದು ಸಾರಿದರು.

ಸಭಾಪಾಲಕರ ಸಂಘದ ತಾಲ್ಲೂಕು ಅಧ್ಯಕ್ಷ ಪಾಸ್ಟರ್ ಜಾನ್ ಸೆಲ್ವಿನ್ ಮಾತನಾಡಿ, ಕಷ್ಟ-ಸುಖಗಳಲ್ಲಿ ಒಂದಾಗಿ ನಿಂತು ಹೊಸಕೋಟೆ ಪ್ರದೇಶದಲ್ಲಿ ಕ್ರಿಸ್ತನ ಸಂದೇಶ ಹರಡುವ ಉದ್ದೇಶದಿಂದ ಈ ಸಂಘ ಸ್ಥಾಪನೆಯಾಗಿದೆ ಎಂದರು.

ತಾಲ್ಲೂಕು ಸಭಾಪಾಲಕರ ಸಂಘದ ಗೌರವಾಧ್ಯಕ್ಷ ಮಂಜು ನೆಹೇಮಿಯ, ಉಪಾಧ್ಯಕ್ಷ ಪಾಸ್ಟರ್ ಸೈಮನ್, ಕಾರ್ಯದರ್ಶಿ ಪಾಸ್ಟರ್ ರಾಜು ಡೇವಿಡ್ ಸೇರಿದಂತೆ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಹೊಸಕೋಟೆ: ಸ್ವಾತಂತ್ರ್ಯ ಪೂರ್ವ ಮತ್ತು ನಂತರ ದೇಶದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳು ಕೊಡುಗೆ ಗಣನೀಯ ಎಂದು ಹಿರಿಯ ಪಾಸ್ಟರ್ ರಮೇಶ್ ತಿಳಿಸಿದರು.

ನಗರದ ಅಭಿಷೇಕ ಪ್ರಾರ್ಥನ ಮಂದಿರದಲ್ಲಿ ನಡೆದ ಹೊಸಕೋಟೆ ಸಭಾಪಾಲಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಕ್ರೈಸ್ತ ಮಿಷನರಿಗಳು ಉಚಿತ ಶಿಕ್ಷಣ, ಆರೋಗ್ಯ, ಅನಾಥಾಶ್ರಮ, ವೃದ್ದಾಶ್ರಮಗಳನ್ನು ನಡೆಸುವ ಮೂಲಕ ಸೇವಾ ಮನೋಭಾವನೆಯನ್ನೂ ಮುಡಿಸುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕ್ರೈಸ್ತ ಸಮುದಾಯದವರು ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳಾಗಿ ಆಯ್ಕೆ ಆಗುತ್ತಿರುವುದು ಕಡಿಮೆ. ಸಮುದಾಯವು ಉನ್ನತ ಹುದ್ದೆಗಳನ್ನು ಅಲಂಕರಿಸಿ ಮತ್ತಷ್ಟು ಸೇವೆ ಮಾಡಲು ಮುಂದಾಗಬೇಕಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಿಮ್ಮ ಸಭೆಗಳಿಗೆ ಬರುವ ಯುವಕ-ಯುವತಿಯರನ್ನು ಸ್ಪರ್ಧಾತ್ಮಕ ಜಗತ್ತಿಗತ್ತಿನ ಮೂಲಕ ಉನ್ನತ ಮಟ್ಟದ ಸ್ಥಾನಗಳಿಗೆ ಹೋಗಲು ಪ್ರೇರಣೆ ನೀಡಿಬೇಕಿದೆ. ಈ ನಿಟ್ಟಿನಲ್ಲಿ ಹೊಸಕೋಟೆ, ಕೋಲಾರ ಬಂಗಾರಪೇಟೆ, ಚಿಕ್ಕಬಳ್ಳಾಪುರ ಭಾಗಗಳಲ್ಲಿ ಮತ್ತಷ್ಟು ಸೇವಕರು ಹುಟ್ಟಬೇಕು. ವಿಂಗಡಣೆ ಆಗುವುದನ್ನು ಬಿಟ್ಟು ನಾವೆಲ್ಲರೂ ಕ್ರಿಸ್ಥನ ಸೇವಕರು ಎಂಬ ಭಾವದೊಂದಿಗೆ ಸಂಘಟಿತರಾಗಿ ಬದಕುಬೇಕು ಎಂದರು.

ಸಭಾಪಾಲರ ಸಂಘದ ತಾಲ್ಲೂಕು ಅದ್ಯಕ್ಷ ಪಾಸ್ಟರ್ ಜಾನ್ ಸೆಲ್ವಿನ್ ಮಾತನಾಡಿ ಹೊಸಕೋಟೆ ತಾಲ್ಲೂಕಿನ 150ಕ್ಕೂ ಹೆಚ್ಚಿನ ಚರ್ಚ್ ಗಳ ಎಲ್ಲಾ ಪಾಸ್ಟರ್ಗಳು ಒಗ್ಗಟ್ಟಾಗಿ ಮತ್ತಷ್ಟು ದೇವರ ನಾಮ ಸ್ಮರಣೆ ಮಾಡುವಲ್ಲಿ ಮುಂದಡಿ ಇಟ್ಟಿರುವುದು ಸಂತಸದ ವಿಚಾರ. ಕಷ್ಟ ಅಥವ ಸುಖದ ಸಂಧರ್ಭ ಬಂದರೂ ಎಲ್ಲರೂ ಒಗ್ಗಟ್ಟಾಗಿ ಹೊಸಕೋಟೆ ಪ್ರಾಂತ್ಯದಲ್ಲಿ ಮತ್ತಷ್ಟು ಕ್ರಿಸ್ಥನ ಸ್ಮರಣೆಗೆ ಮುಂದಾಗಬೇಕಿದೆ. ಆದ್ದರಿಂದಲೆ ಸಭಾಪಾಲಕರ ಸಂಘ ಸ್ಥಾಪನೆ ಮಾಡಲಾಗಿದೆ ಎಂದರು.

ತಾಲ್ಲೂಕು ಸಭಾಪಾಲಕರ ಸಂಘದ ಗೌರವಾಧ್ಯಕ್ಷರಾದ ಮಂಜು ನೆಹೇಮಿಯ, ಉಪಾಧ್ಯಕ್ಷರಾದ ಪಾಸ್ಟರ್ ,ಸೈಮನ್, ಕಾರ್ಯದರ್ಶಿಯಾದ ಪಾಸ್ಟರ್ ರಾಜು ಡೇವಿಡ್, ಜಂಟಿ ಕಾರ್ಯದರ್ಶಿಯಾದ ಪಾಸ್ಟರ್ ವೆಂಕಟೇಶ್, ಖಜಾಂಚಿ ಪಾಸ್ಟರ್ ಮಂಜುನಾಥ್, ಜಂಟಿ ಕಾರ್ಯದರ್ಶಿಯಾದ ಪಾಸ್ಟರ್ ಪ್ರತಾಪ್ ಕುಮಾರ್, ಸಲಹೆಗಾರರಾದ ಪಾಸ್ಟರ್ ಡೇವಿಡ್ರಾಜ್, ಪಾಸ್ಟರ್ ಶ್ರೀನಿವಾಸ್, ಪಾಸ್ಟರ್ ಮೂರ್ತಿ, ಪ್ರಜ್ವಲ್ ಸ್ವಾಮಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.