ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡಿಗಾನಹಳ್ಳಿ: ಆರು ಕುರಿ, ಮೇಕೆ ಕಳವು

Published 15 ಜನವರಿ 2024, 7:14 IST
Last Updated 15 ಜನವರಿ 2024, 7:14 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಹೋಬಳಿಯ ದಂಡಿಗಾನಹಳ್ಳಿ ಗ್ರಾಮದ ರೈತ ವೆಂಕಟೇಶಪ್ಪ ಎಂಬುವವರಿಗೆ ಸೇರಿದ ಶೆಡ್‌ನಲ್ಲಿ ಕಟ್ಟಿಹಾಕಿದ್ದ ಮೂರು ಕುರಿ ಹಾಗೂ ಮೂರು ಮೇಕೆಗಳನ್ನು ಶನಿವಾರ ರಾತ್ರಿ ಕಳ್ಳತನ ಮಾಡಲಾಗಿದೆ.

ಈ ಕುರಿತು ರೈತ ವೆಂಕಟೇಶಪ್ಪ ವಿಜಯಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಕಳುವಾಗಿರುವ ಕುರಿಗಳು ಮತ್ತು ಮೇಕೆಗಳು ಸುಮಾರು ₹2 ಲಕ್ಷ ಮೌಲ್ಯದವು. ರಾತ್ರಿ ದನಗಳ ಶೆಡ್‌ನಲ್ಲಿ ಕಟ್ಟಲಾಗಿತ್ತು. ದುಷ್ಕರ್ಮಿಗಳು, ಶೆಡ್ ಬೀಗ ಮುರಿದು, ಕಳವು ಮಾಡಿದ್ದಾರೆ. ಬೀಗವನ್ನು ಎತ್ತಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ವಿಜಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT