ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆನೇಕಲ್ | ಶಿಥಿಲಾವಸ್ಥೆಯಲ್ಲಿದ್ದ ಕಲ್ಲುಬಾಳು ಸರ್ಕಾರಿ ಶಾಲೆಗೆ ಹೈಟೆಕ್‌ ಸ್ಪರ್ಶ

Published 18 ಡಿಸೆಂಬರ್ 2023, 6:35 IST
Last Updated 18 ಡಿಸೆಂಬರ್ 2023, 6:35 IST
ಅಕ್ಷರ ಗಾತ್ರ

ಆನೇಕಲ್ : ಸೌಲಭ್ಯ ಕೊರತೆ ಹಾಗೂ ಶಿಥಿಲಾವಸ್ಥೆಯಲ್ಲಿದ್ದ ಆನೇಕಲ್‌ ತಾಲ್ಲೂಕಿನ ಕಲ್ಲುಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯು ಸಿಐಇ ಇಂಡಿಯಾ ಮತ್ತು ಬಿಲ್‌ಫೋರ್ಜ್‌ ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿಯಲ್ಲಿ ₹6 ಕೋಟಿ ವೆಚ್ಚದಲ್ಲಿ ಹೈಟೆಕ್‌ ಸ್ಪರ್ಶ ನೀಡಿದೆ.

ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣವಾಗಿರುವ ಶಾಲೆ ಡಿ.19ರಂದು (ಮಂಗಳವಾರ) ಉದ್ಘಾಟನೆಗೆ ಸಜ್ಜಾಗಿದೆ.

ಆನೇಕಲ್‌ ತಾಲ್ಲೂಕಿನ ಕಲ್ಲುಬಾಳು ಶಾಲೆಯು 1963ರಲ್ಲಿ ಪ್ರಾರಂಭವಾಗಿತ್ತು. ಹೆಂಚಿನ ಕಟ್ಟಡದಲ್ಲಿ ನಡೆಯುತ್ತಿದ್ದ ಶಾಲಾ ಕೊಠಡಿಗಳಿಗೆ ಶೀಟ್‌ ಕಟ್ಟಡವಾಗಿ ಅಭಿವೃದ್ಧಿ ಮಾಡಲಾಗಿತ್ತು. ಸುಮಾರು 60 ವರ್ಷದ ಈ ಕೊಠಡಿಗಳು ಶಿಥಿಲಗೊಂಡಿದ್ದವು. ಮಳೆ ಬಂದರೆ ನೀರು ಸುರಿಯುತ್ತಿತು.

2015-16ರಲ್ಲಿ ಬಿಲ್‌ಫೋರ್ಜ್‌ ಕಂಪನಿಯು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಯಿತು. ಆದರೆ ಕಟ್ಟಡವನ್ನು ಪದೇ ಪದೇ ದುರಸ್ತಿಗೆ ಬರುತ್ತಿತು. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂಬ ಅಭಿಲಾಷೆಯಿಂದ ಬಿಲ್‌ಫೋರ್ಜ್‌ ಸಂಸ್ಥೆಯು ದಿಟ್ಟ ತೀರ್ಮಾನ ಕೈಗೊಂಡು ಶಾಲೆಯ ಸಮಗ್ರ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಿತು. ಅದರಂತೆ 2022ರಲ್ಲಿ ಕಂಪನಿಯಿಂದ ಸಿಎಸ್‌ಆರ್‌ ಯೋಜನೆಯ ಅನುಮೋದನೆ ಪಡೆದು ಕೆಲಸ ಪ್ರಾರಂಭ ಮಾಡಿ ಒಂದು ವರ್ಷದೊಳಗೆ ಸುಂದರ ಕಟ್ಟಡವನ್ನು ವಿದ್ಯಾರ್ಥಿಗಳಿಗೆ ಸಮರ್ಪಿಸಿದೆ.

1974ರಲ್ಲಿ ಗ್ರಾಮದ ಪಟೇಲ್‌ ಮಲ್ಲಾರೆಡ್ಡಿ ಅವರು ನೀಡಿದ ಅರ್ಧ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕಟ್ಟಡ ನಿರ್ಮಾಣವಾಗಿ ಶಾಲೆ ನಡೆಯುತ್ತಾ ಬಂದಿದ್ದು 60 ವರ್ಷಗಳ ಷಷ್ಠಿ ಪೂರ್ತಿ ಸಂಭ್ರಮದಲ್ಲಿತ್ತು. ಈ ಸಂಭ್ರಮಕ್ಕೆ ಬಿಲ್‌ಫೋರ್ಜ್‌ ಕಂಪನಿ ಮೆರಗು ನೀಡಿದೆ.

ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ದೊರಯುವ ಎಲ್ಲಾ ಸೌಲಭ್ಯಗಳನ್ನು ಶಾಲೆಯಲ್ಲಿ ಕಲ್ಪಿಸಲಾಗಿದೆ. 17 ಸುಸಜ್ಜಿತ ಕೊಠಡಿಗಳು, ಎರಡು ಸಭಾಂಗಣಗಳು, ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಬಯಲು ರಂಗ ಮಂದಿರ, ಹೈಟೆಕ್‌ ಶೌಚಾಲಯ, ಪ್ರಯೋಗಾಲಯ, ಕಂಪ್ಯೂಟರ್‌ ಲ್ಯಾಬ್‌, ಒಳಾಂಗಣ ಕ್ರೀಡಾಂಗಣ, ಸಿಬ್ಬಂದಿ ಕೊಠಡಿ, ಸಿಕ್‌ರೂಮ್‌ ಸೇರಿದಂತೆ ಸುಮಾರು 500 ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಸೌಲಭ್ಯವನ್ನು ಒದಗಿಸಲಾಗಿದೆ.

ಪ್ರಸ್ತುತ ಶಾಲೆಯಲ್ಲಿ 180 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಭವಿಷ್ಯದಲ್ಲಿ 500-1000ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಕಟ್ಟಡ ನಿರ್ಮಾಣವಾಗಿದೆ.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಕಲ್ಲುಬಾಳು ಸರ್ಕಾರಿ ಶಾಲೆಯು ಹೈಟೆಕ್ ಶಾಲೆಯಾಗಿ ನಿರ್ಮಾಣವಾಗಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.

ಐದು ವರ್ಷ ನಿರ್ವಹಣೆ

ಗ್ರಾಮೀಣ ಭಾಗದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಗುರಿಯೊಂದಿಗೆ ಸುಮಾರು ₹6 ಕೋಟಿ ಅಂದಾಜು ವೆಚ್ಚದಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಐದು ವರ್ಷಗಳ ಕಾಲ ನಿರ್ವಹಣೆ ಮಾಡಲು ಶಿಕ್ಷಣ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಬಿಲ್‌ಫೋರ್ಜ್‌ ಸಂಸ್ಥೆಯ ಸಿಎಸ್‌ಆರ್‌ ವಿಭಾಗದ ಮುಖ್ಯಸ್ಥ ರೆಜಿನಾಲ್ಡ್‌ ಜೇಕಬ್‌ ತಿಳಿಸಿದರು.

ಬಿಲ್‌ಫೋರ್ಜ್‌ ಕಂಪನಿಯು ಹೆಚ್ಚಿನ ಸೌಲಭ್ಯಗಳನ್ನು ಶಾಲೆಗೆ ಕಲ್ಪಿಸಿಕೊಟ್ಟಿದೆ. ದಾಖಲಾತಿ ಹೆಚ್ಚಳ ಮಾಡಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಂಸ್ಥೆ ಮತ್ತು ಶಿಕ್ಷಣ ಇಲಾಖೆ ನೀಡಿರುವ ಗುರಿಯನ್ನು ಈಡೇರಿಸಲಾಗುವುದು ಎಂದು ಕಲ್ಲುಬಾಳು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅಮುದಾ ತಿಳಿಸಿದರು. ಪರಿಸರ ಸ್ನೇಹಿ ಶಾಲಾ ಕಟ್ಟಡ ಕಲ್ಲುಬಾಳು ಸರ್ಕಾರಿ ಶಾಲೆಯ ನೂತನ ಕಟ್ಟಡದಲ್ಲಿ ಸೋಲಾರ್‌ ಅಳವಡಿಕೆ ಮಾಡಿಕೊಂಡಿದೆ. ಮಳೆ ನೀರು ಕೊಯ್ಲು ಅಳವಡಿಕೆ ಸೇರಿದಂತೆ ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಲಾಗಿದೆ. ಸುಸಜ್ಜಿತ ಕಟ್ಟಡದಲ್ಲಿ ಹಲವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಆಕರ್ಷಣೆಗೆ ಕಾರಣವಾಗಿದೆ.

ಆನೇಕಲ್‌ ತಾಲ್ಲೂಕಿನ ಕಲ್ಲುಬಾಳು ಸರ್ಕಾರಿ ಶಾಲೆಯ ಹಳೆಯ ಕಟ್ಟಡದಲ್ಲಿರುವ ಕಿರು ಕೊಠಡಿಗಳು (ಸಂಗ್ರಹ ಚಿತ್ರ)
ಆನೇಕಲ್‌ ತಾಲ್ಲೂಕಿನ ಕಲ್ಲುಬಾಳು ಸರ್ಕಾರಿ ಶಾಲೆಯ ಹಳೆಯ ಕಟ್ಟಡದಲ್ಲಿರುವ ಕಿರು ಕೊಠಡಿಗಳು (ಸಂಗ್ರಹ ಚಿತ್ರ)
ಆನೇಕಲ್‌ ತಾಲ್ಲೂಕಿನ ಕಲ್ಲುಬಾಳು ಸರ್ಕಾರಿ ಶಾಲೆಯ ಹಳೆಯ ಕಟ್ಟಡದ ನೋಟ (ಸಂಗ್ರಹ ಚಿತ್ರ)
ಆನೇಕಲ್‌ ತಾಲ್ಲೂಕಿನ ಕಲ್ಲುಬಾಳು ಸರ್ಕಾರಿ ಶಾಲೆಯ ಹಳೆಯ ಕಟ್ಟಡದ ನೋಟ (ಸಂಗ್ರಹ ಚಿತ್ರ)
ಕಲ್ಲುಬಾಳು ಸರ್ಕಾರಿ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಿರುವುದು
ಕಲ್ಲುಬಾಳು ಸರ್ಕಾರಿ ಶಾಲೆಗೆ ಹೈಟೆಕ್‌ ಸ್ಪರ್ಶ ನೀಡಿರುವುದು
ಕಲ್ಲುಬಾಳು ಸರ್ಕಾರಿ ಶಾಲೆಯ ಒಳಾಂಗಣ ಕ್ರೀಂಡಾಗಣ
ಕಲ್ಲುಬಾಳು ಸರ್ಕಾರಿ ಶಾಲೆಯ ಒಳಾಂಗಣ ಕ್ರೀಂಡಾಗಣ
ಸರ್ಕಾರಿ ಶಾಲೆಯಲ್ಲಿನ ಸಭಾಂಗಣ
ಸರ್ಕಾರಿ ಶಾಲೆಯಲ್ಲಿನ ಸಭಾಂಗಣ
ಕಲ್ಲುಬಾಳು ಸರ್ಕಾರಿ ಶಾಲೆಯಲ್ಲಿ ಗ್ರಂಥಾಲಯ ಸೌಲಭ್ಯ ಕಲ್ಪಿಸಿರುವುದು
ಕಲ್ಲುಬಾಳು ಸರ್ಕಾರಿ ಶಾಲೆಯಲ್ಲಿ ಗ್ರಂಥಾಲಯ ಸೌಲಭ್ಯ ಕಲ್ಪಿಸಿರುವುದು
ಹೈಟೆಕ್‌ ಶೌಚಾಲಯದ ನೋಟ
ಹೈಟೆಕ್‌ ಶೌಚಾಲಯದ ನೋಟ
ವಿಜ್ಞಾನ ಪ್ರಯೋಗಾಲಯ
ವಿಜ್ಞಾನ ಪ್ರಯೋಗಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT