ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ಗುರುವಾರ ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ

Published 17 ಜನವರಿ 2024, 15:57 IST
Last Updated 17 ಜನವರಿ 2024, 15:57 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ‘ಡಿ’ಕ್ರಾಸ್ ಸಮೀಪದ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರಣ ಜ.18 ರಂದು ನಗರದ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ನಗರ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿ,66/11ಕೆ.ವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ನಡೆಯಲಿದೆ. ಈ ಉಪಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ 10 ಗಂಟೆ ಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.

ವಿದ್ಯುತ್ ಅಡಚಣೆ ಉಂಟಾಗಲಿರುವ ಪ್ರದೇಶಗಳು: ಭಾಗಶಃ ನಗರದ ಪ್ರದೇಶ, ಡಿ.ಕ್ರಾಸ್, ಮುತ್ಸಂದ್ರ, ಟಿ.ಬಿ.ಬಡಾವಣೆ, ಪ್ರಿಯರ್ದಶಿನಿ ಬಡಾವಣೆ, ರೋಜಿಪುರ, ಗಂಗಧರಪುರ,ವಿನಾಯಕನಗರ, ಸೋಮೇಶ್ವರ ಬಡಾವಣೆ, ಬಸವೇಶ್ವರನಗರ, ಮಾರುತಿನಗರ, ಕುಂಬಾರಪೇಟೆ, ದರ್ಜಿಪೇಟೆ, ಗಾಣಿಗರಪೇಟೆ, ವಡ್ಡರಪೇಟೆ, ದೇಶದಪೇಟೆ, ಸಿನಿಮಾ ರಸ್ತೆ, ಹಳೇ ಬಸ್‌ ನಿಲ್ದಾಣ, ಕಚೇರಿಪಾಳ್ಯ, ಇಸ್ಲಾಂಪುರ, ಕಲ್ಲುಪೇಟೆ, ತ್ಯಾಗರಜನಗರ, ದೇವರಾಜನಗರ, ಶಾಂತಿನಗರ, ಕರೇನಹಳ್ಳಿ, ದರ್ಗಾಜೋಗಿಹಳ್ಳಿ, ಕುರುಬರಹಳ್ಳಿ, ಕೊಡಿಗೇಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ತಳಗವಾರ ಮಾದಗೊಂಡನಹಳ್ಳಿ, ಹಸನ್‌ಘಟ್ಟ, ಕೋಳುರು, ಕಂಟನಕುಂಟೆ, ಅಳ್ಳಾಲಸಂದ್ರ ಅಂತರಹಳ್ಳಿ,ಗೊಲ್ಲಹಳ್ಳಿ,ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರಮಗೊಂಡನಹಳ್ಳಿ,ಹಾಡೋನಹಳ್ಳಿ, ಎಸ್.ನಾಗೇನಹಳ್ಳಿ, ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟಾ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ, ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ರಘುನಾಥಪುರ, ನಾಗದೇನಹಳ್ಳಿ, ಮೋಪರಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಹೀರೆಗುಡ್ಡದಹಳ್ಳಿ, ಕುರುವಿಗೆರೆ, ನಂದಿಮೋರಿ, ರಾಜಘಟ್ಟ,ಕಂಚಿಗನಾಳ,ದಾಸಗೊಂಡನಹಳ್ಳಿ,ಗಂಡರಾಜಪುರ, ಅಂಚರಹಳ್ಳಿ,ಬೀಡಿಕೆರೆ,ಹಮಾಮ್, ಶಿವಪುರ, ಸೊಣ್ಣಪ್ಪನಹಳ್ಳಿ, ಕೋಡಿಹಳ್ಳಿ, ಕೊನಘಟ್ಟ, ಲಿಂಗನಹಳ್ಳಿ, ಕಮಲೂರು, ನೆಲ್ಲುಕುಂಟೆ, ನಾಗಶೆಟ್ಟಿಹಳ್ಳಿ, ಮಜರಾಹೊಸಹಳ್ಳಿ, ಶಿರವಾರ, ಮೆಣಸಿ, ಅಣಗಲಪುರ, ನೇರಳೆಘಟ್ಟ,ಹೊನ್ನಾಘಟ್ಟ, ಕೆಸ್ತೂರು,ಹಣಬೆ, ಮರಳೇನಹಳ್ಳಿ, ಶ್ರೀನಿವಾಸಪುರ, ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ, ತಿಪ್ಪೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಜ.21ರಂದು ಸುಸ್ವರ ಸಂಗೀತ ಸ್ಪರ್ಧೆ

ದೊಡ್ಡಬಳ್ಳಾಪುರ: ಸುಸ್ವರ ಟ್ರಸ್ಟ್ ವತಿಯಿಂದ ಶಾಸ್ತ್ರೀಯ ಸಂಗೀತ ಗಾಯನ ಸ್ಪರ್ಧೆ ಜ.21ರಂದು ಬೆಳಿಗ್ಗೆ 10 ಗಂಟೆಯಿಂದ ನಗರದ ಚಿಕ್ಕಪೇಟೆಯ ಕಾಶಿವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ನಡೆಯಲಿದೆ. 12 ವರ್ಷದೊಳಗೆ, 12 ರಿಂದ 18 ವರ್ಷದವರೆಗೆ, 18 ವರ್ಷ ಮೇಲ್ಪಟ್ಟವರಿಗಾಗಿ ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ:9972721455.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT