ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಪೊಲೀಸ್‌ ವ್ಯವಸ್ಥೆಗೆ ಬೇಕಿದೆ ಬಲ

‌ದೊಡ್ಡಬಳ್ಳಾಪುರ: ಹೆಚ್ಚಿದ ಅಪರಾಧ ಚಟುವಟಿಕೆಗಳು
Published 27 ನವೆಂಬರ್ 2023, 4:40 IST
Last Updated 27 ನವೆಂಬರ್ 2023, 4:40 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇತ್ತೀಚಿಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕ್ಷುಲ್ಲಕ ಕಾರಣಗಳಿಗೆ ಕೊಲೆ ಮತ್ತು ಬಡಿದಾಟಗಳು ನಡೆಯುತ್ತಿವೆ. ಇವೆಲ್ಲಕ್ಕೂ ಕಡಿವಾಣ ಹಾಕಲು ತಾಲ್ಲೂಕಿನ ಪೊಲೀಸ್‌ ವ್ಯವಸ್ಥೆಗೆ ಬಲ ತುಂಬಬೇಕೆಂಬ ಒತ್ತಾಯ‌ ಕೇಳಿ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ತಾಲ್ಲೂಕುಗಳಲ್ಲಿ ದೊಡ್ಡಬಳ್ಳಾಪುರ ಪ್ರಮುಖ ಸ್ಥಾನದಲ್ಲಿದೆ. ಆದರೆ ಪೊಲೀಸ್‌ ವ್ಯವಸ್ಥೆ ಮಾತ್ರ ಹಾಗೇ ಇದೆ. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್‌ ವ್ಯವಸ್ಥೆಯನ್ನು ಬಲಗೊಳಿಸುವ ಕೆಲಸ ಆಳುವ ಸರ್ಕಾರಗಳಿಂದ ಆಗಿಲ್ಲ.

ದೊಡ್ಡಬಳ್ಳಾಪುರ‌ ತಾಲ್ಲೂಕಾಗಿ ರೂಪುಗೊಂಡಾಗ ಇದ್ದ ಅಂದಾಜು 2.50 ಲಕ್ಷ ಜನಸಂಖ್ಯೆ, ಈಗ ಅಂದಾಜು ₹3.50 ಲಕ್ಷಕ್ಕೆ ಏರಿಕೆಯಾಗಿದೆ. ಇದಕ್ಕೆ ಅನುಗುಣವಾಗಿ ತಾಲ್ಲೂಕಿನಲ್ಲಿ ಪೊಲೀಸ್‌ ಠಾಣೆ ಮತ್ತು ಸಿಬ್ಬಂದಿ ಕೊರತೆ ಇದೆ. ಸಿಬ್ಬಂದಿ ಕೊರತೆಯಿಂದ ಇದೆ ಪೊಲೀಸ್‌ ಅಧಿಕಾರಿಗಳು ಪದೇ ಪದೇ ಹೇಳಿತ್ತಿದ್ದಾರೆ. ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದುವರೆಗೆ ತಲೆ ಕೆಡಿಸಿಕೊಂಡಿಲ್ಲ.

ಸದ್ಯ ದೊಡ್ಡಬಳ್ಳಾಪುರ ನಗರ, ದೊಡ್ಡಬಳ್ಳಾಪುರ ಗ್ರಾಮಾಂತರ, ಹೊಸಹಳ್ಳಿ, ದೊಡ್ಡ ಬೆಳವಂಗಲದಲ್ಲಿ ಪೊಲೀಸ್‌ ಠಾಣೆ ಇದೆ. ನಗರಕ್ಕೆ ಸಂಚಾರ ಠಾಣೆ, ಬಾಶೆಟ್ಟಿಯಲ್ಲಿ ಮತ್ತು ಕನಸವಾಡಿಗೆ ಪೊಲೀಸ್‌ ಠಾಣೆ ಅಗತ್ಯವಿದೆ.

ತಾಲ್ಲೂಕಿನ ದೊಡ್ಡಬೆಳವಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಎರಡು ವಾರಗಳ ಹಿಂದೆ ಡಾಬಾ ಬಳಿಯಲ್ಲಿ ಪೋಟೋ ಶೂಟ್‌ ವಿಚಾರಕ್ಕೆ ಯುವಕನ ಕೊಲೆ ನಡೆದಿದೆ. ನಗರದ ರೈಲ್ವೆ ನಿಲ್ದಾಣ ಸಮೀಪದ ಬಾರ್‌ ಸಮೀಪ ದುರುಗುಟ್ಟಿ ನೋಡಿದಕ್ಕೆ ಜಗಳ ತೆಗೆದು ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಲಾಗಿದೆ. ಇವು ಇತ್ತೀಚಿನ ಅಪರಾಧ ಪ್ರಕರಣಕ್ಕೆ ತಾಜ ನಿರ್ದಶನ. ಕ್ರಿಕೆಟ್‌ ಆಟದ ಮೈದಾನದಲ್ಲಿ ವಾಹನ ನಿಲುಗಡೆ ವಿಚಾರಕ್ಕೆ ಇಬ್ಬರು ಅಮಾಯಕ ಯುವಕರನ್ನು ನೂರಾರು ಜನರ ಎದುರಲ್ಲೇ ನಡು ರಸ್ತೆಯಲ್ಲಿ ಚಾಕು ಇರಿದು ಕೊಲೆ ಮಾಡಲಾಗಿತ್ತು.

‌ಕೊಲೆಯಲ್ಲಿ ಅಂತ್ಯವಾಗುತ್ತಿರುವ ಪ್ರಕರಣಗಳಷ್ಟೇ ಅಲ್ಲದೆ ಡಾಬಾಗಳ ಬಳಿ ನಡೆಯುವ ಹೊಡೆದಾಟಗಳು ಸಾಮಾನ್ಯವಾಗಿ ಬಿಟ್ಟಿವೆ.

ಬಾಶೆಟ್ಟಿಹಳ್ಳಿ ಕೈಗಾರಿಕಾ ವಲಯ ನಾಲ್ಕು ಹಂತದಲ್ಲಿ ವಿಸ್ತರಣೆಯಾದ ನಂತರ ನಾಲ್ಕನೇ ಹಂತದಲ್ಲಿ ಗಾರ್ಮೆಂಟ್ಸ್‌ಗಳಷ್ಟೇ ಅಲ್ಲದೆ ಇತರೆ ಬೃಹತ್‌ ಉತ್ಪಾದಕ ಕೈಗಾರಿಕೆಗಳು ಕಾರ್ಯಾರಂಭ ಮಾಡಿರುವುದರಿಂದ ರಾಜ್ಯ, ಹೊರ ರಾಜ್ಯದ ಕಾರ್ಮಿಕರು ಸೇರಿದಂತೆ ವಿದೇಶಿ ಎಂಜಿನಿಯರ್‌ಗಳ ಸಂಖ್ಯೆಯು ಹೆಚ್ಚಾಗಿದೆ.

ಬಾಶೆಟ್ಟಿಹಳ್ಳಿ ಕೈಗಾರಿಕಾ ವಲಯದ ವ್ಯಾಪ್ತಿಯ ಅರೆಹಳ್ಳಿಗುಡ್ಡದಹಳ್ಳಿ, ಓಬದೇನಹಳ್ಳಿ, ವರದನಹಳ್ಳಿ, ಎಳ್ಳುಪುರ, ಆದಿನಾರಾಯಣಹೊಸಹಳ್ಳಿ, ಬಿಸುವನಹಳ್ಳಿ, ವೀರಾಪುರ, ಕಸವನಹಳ್ಳಿ, ತಿಪ್ಪಾಪುರ ಈ ಗ್ರಾಮಗಳಲ್ಲಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ವಾಸಮಾಡವ ಸಂಖ್ಯೆ ಹೆಚ್ಚಾಗಿದೆ. ಕೈಗಾರಿಕೆಗಳ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದ ಉತ್ತರ ಭಾರತೀಯ ಕಾರ್ಮಿಕರ ಮೇಲಿನ ಅವಲಂಬವನೆ ಅನಿವಾರ್ಯವಾಗಿದೆ.

ವಿ.ಎಸ್‌.ರವಿಕುಮಾರ್‌
ವಿ.ಎಸ್‌.ರವಿಕುಮಾರ್‌
ಸಿ.ಎಚ್‌.ರಾಮಕೃಷ್ಣ
ಸಿ.ಎಚ್‌.ರಾಮಕೃಷ್ಣ

ಸಾರ್ವಜನಿಕರು ಏನಂತಾರೆ ?

ವಾರ್ಡ್‌ ‌ಗ್ರಾಮ ಬೀಟ್‌ ಅಗತ್ಯ ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗೆ ನಡೆದ ಕೊಲೆ ಹಲ್ಲೆ ಪ್ರಕರಣಗಳಿಂದ ಎಚ್ಚೆತ್ತಿರುವ ಪೊಲೀಸರು ರೌಡಿ ಪೆರೇಡ್‌ ನಡೆಸಿ ಕಠಿಣ ಕ್ರಮದ ಖಡಕ್‌ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ವಾರ್ಡ್‌ ಬೀಟ್‌ ಸಭೆಗಳು ಗ್ರಾಮ ಬೀಟ್‌ ಸಭೆ ನಡೆಸುವ ಅಗತ್ಯವಿದೆ. ಇದಷ್ಟೇ ಅಲ್ಲದೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸುವ ಮೂಲಕ ಸಭೆಯಲ್ಲಿನ ಸಲಹೆ ಸೂಚನೆಯನ್ನು ಪ್ರಮಾಣಿಕವಾಗಿ ಜಾರಿಗೊಳಿಸಬೇಕು. ಜಿ.ಸತ್ಯನಾರಾಯಣ ಹಿರಿಯ ಕನ್ನಡಪರ ಹೋರಾಟಗಾರ ಕ್ಯಾಮೆರಾ ಕಣ್ಗಾವಲು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿನ ಪ್ರಮುಖ ವೃತ್ತಗಳಾಗಿರುವ ಬ್ಯಾಂಕ್‌ ಸರ್ಕಲ್‌ ಏಸ್ಸಿಲಾರ್‌ ಕೈಗಾರಿಕಾ ವೃತ್ತ ಜವಳಿ ಪಾರ್ಕ್‌ ವೃತ್ತ  ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ವ್ಯಾಪ್ತಿಯ ಗ್ರಾಮಗಳಲ್ಲಿ ಹಾಗೂ ಕಾರ್ಮಿಕರು ವಾಸ ಇರುವ ವೃತ್ತಗಳಲ್ಲಿ ಕೈಗಾರಿಕೆಗಳ ಸಿಎಸ್‌ಆರ್‌ ನಿಧಿಯ ಸಹಕಾರದಿಂದ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಸದಾ ಕಣ್ಗಾವಲು ಇಡುವ ಕೆಲಸವನ್ನು ಪೊಲೀಸ್‌ ಇಲಾಖೆ ತುರ್ತಾಗಿ ಮಾಡಬೇಕಿದೆ. ಇದರಿಂದ ಅಪರಾಧ ಕೃತ್ಯಗಳನ್ನು ಕನಿಷ್ಠ ಪ್ರಮಾಣದಲ್ಲಾದರೂ ತಡೆಯಲು ಸಾಧ್ಯವಾಗಲಿದೆ. ವಿ.ಎಸ್‌.ರವಿಕುಮಾರ್‌ ಜೆಡಿಎಸ್‌ ನಗರ ಘಟ್ಟದ ಅಧ್ಯಕ್ಷ ಠಾಣೆ ಸಿಬ್ಬಂದಿ ಸಂಖ್ಯೆ ಹೆಚ್ಚಳ ಅನಿವಾರ್ಯ ತಾಲ್ಲೂಕಿನಲ್ಲಿ ಜನ ವಸತಿ ಪ್ರದೇಶ ಹಾಗೂ ಕೈಗಾರಿಕಾ ಪ್ರದೇಶಗಳು ವೇವಾಗಿ ವಸ್ತರಣೆಯಾಗುತ್ತಿವೆ. ಆದರೆ ಈ ಹಿಂದೆ ಇದ್ದಷ್ಟೇ ಪೊಲೀಸ್‌ ಠಾಣೆ ಸಿಬ್ಬಂದಿಗಳು ಇದ್ದಾರೆ. ನಗರ ಸೇರಿದಂತೆ ಇತ್ತೀಚೆಗೆ ತಾಲ್ಲೂಕಿನ ಎಲ್ಲಾ ಪೊಲೀಸ್‌ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಯಿತು. ಸಬ್‌ ಇನ್‌ಸ್ಪೆಕ್ಟರ್‌ಗಳು ಇದ್ದ ಸ್ಥಳಕ್ಕೆ ಇನ್‌ಸ್ಪೆಕ್ಟರ್‌ಗಳು ಬಂದರು. ಆದರೆ ಠಾಣೆಗೆ ಅಗತ್ಯ ಇರುವ ಹೆಚ್ಚುವರಿ ಸಿಬ್ಬಂದಿಯಾಗಲೀ ಇತರೆ ಸೌಲಭ್ಯಗಳನ್ನಾಗಲೀ ಕಲ್ಪಿಸಿಲ್ಲ. ನಗರದಲ್ಲಿ ಶಾಲೆಗೆ ಮಗಳನ್ನು ಕರೆತರುತ್ತಿದ್ದ ತಂದೆ ಮಗಳು ಇಬ್ಬರು ಟಿಪ್ಪರ್‌ ಲಾರಿಗೆ ಸಿಕ್ಕಿ ಮೃತಪಟ್ಟಾಗ ಆಡಳಿತ ರೂಡ ಕಾಂಗ್ರೆಸ್‌ ಪಕ್ಷದ ಮುಖಂಡರು ಪೊಲೀಸ್‌ ಠಾಣೆಯಲ್ಲಿ ಸಭೆ ನಡೆಸಿ ಗೃಹ ಸಚಿವರಿಗೆ ಮನವಿ ಸಲ್ಲಿಸಿ ಸಂಚಾರ ಪೊಲೀಸ್‌ ಠಾಣೆ ತರುವ ಬಗ್ಗೆ ಹೇಳಿದ್ದರು. ಆದರೆ ಘಟನೆ ಮಾಸುತ್ತಿದ್ದಂತೆ ಸಂಚಾರ ಪೊಲೀಸ್‌ ಠಾಣೆ ತರುವ ಮಾತು ಸಹ ಮಾಸಿ ಹೋಗಿದೆ. ಮಧುರೆ ಹೋಬಳಿಯಲ್ಲಿ ಇಡೀ ತಾಲ್ಲೂಕಿಗೆ ಹೆಚ್ಚಿನ ಹೊಸ ಜನವಸತಿ ಪ್ರದೇಶಗಳು ಬಂದಿವೆ. ಮಧುರೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಪೊಲೀಸ್‌ ಠಾಣೆಯ ಸ್ಥಾಪನೆ ತುರ್ತಾಗಿದೆ. ಸಿ.ಎಚ್‌.ರಾಮಕೃಷ್ಣ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಪೊಲೀಸ್‌ ಇಲಾಖೆ ಸದಾ ಸನ್ನದ್ಧ ಪುಂಡರ ಹಾವಳಿಯನ್ನು ತಡೆಯಲು ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿದೆ. ಸಾರ್ವಜನಿಕರು ಯಾವದೇ ರೀತಿಯ ತೊಂದರೆಗಳು ಉಂಟಾದಾಗ 112 ಸಂಖ್ಯೆಗೆ ಹಗಲು ರಾತ್ರಿ ಎನ್ನದೇ ದಿನದ 24 ಗಂಟೆಗಳ ಯಾವುದೇ ಸಮಯದಲ್ಲಿ ಕರೆ ಮಾಡಿ ತಿಳಿಸಬಹುದು. ದೂರು ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು. ಎ.ಅಮರೇಶಗೌಡ ನಗರ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT