ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯಲ್ಲಿ ವಾಸ್ತವ ಮರೆಮಾಚದಿರಿ: ಇತಿಹಾಸ ಸಂಶೋಧಕ ಹಾಗೂ ಉಪನ್ಯಾಸಕ ಶಫಿ ಮಹಮದ್

Last Updated 17 ಜನವರಿ 2020, 13:54 IST
ಅಕ್ಷರ ಗಾತ್ರ

ದೇವನಹಳ್ಳಿ: ಐತಿಹಾಸಿಕ ಘಟನೆಗಳ ಸಂಧೋದನೆಯಲ್ಲಿ ವಾಸ್ತವ ಮರೆ ಮಾಚಿದರೆ ಕಟು ಸತ್ಯ ಹೊರ ಬರುವುದು ಸಾಧ್ಯವಿಲ್ಲ ಎಂದು ಇತಿಹಾಸ ಸಂಶೋಧಕ ಶಫಿ ಮಹಮದ್ ಹೇಳಿದರು.

2017 ರಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ದೇವನಹಳ್ಳಿ ತಾಲ್ಲೂಕಿನ ಕೊಯಿರಾ ಬೆಟ್ಟದ ಮನಗೊಂಡನಹಳ್ಳಿ ಬಳಿ ಸಂಶೋಧನೆ ಮಾಡಿದಾಗ ದೊರಕಿರುವ ಎರಡು ಮನುಷ್ಯರ ಮೃತ ದೇಹದ ಕಳೇಬರ ಪರಿಶೀಲಿಸಿದಾಗ 3 ಸಾವಿರ ವರ್ಷಗಳ ಹಿಂದೆ ಇಲ್ಲಿ ಮನುಷ್ಯರು ವಾಸಿಸುತ್ತಿದ್ದರು ಎಂದು ದೃಢಗೊಂಡಿದೆ. ಕೊಯಿರಾ ಬೆಟ್ಟ ಹಳೆ ಶಿಲಾಯುಗದ ಮಾನವರು ಇದ್ದರು ಎಂಬುದು ಇಲಾಖೆಯಲ್ಲಿ ದಾಖಲಾಗಿದೆ ಎಂದು ಹೇಳಿದರು.

‘ನಮ್ಮ ಸುತ್ತಲಿನ ಇತಿಹಾಸ, ಭೌಗೋಳಿಕ ಲಕ್ಷಣ, ಪರಂಪರೆಯ ಜೀವನ ಶೈಲಿಯನ್ನು ತಿಳಿದುಕೊಳ್ಳಬೇಕು. ಇತಿಹಾಸವೆಂದರೆ ತ್ಯಾಗ ಬಲಿದಾನದ ಸಂಕೇತ ಎಂಬುದನ್ನು ಆರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕ.ಸಾ.ಪ ನಿಕಟಪೂರ್ವ ಅಧ್ಯಕ್ಷ ಶ್ರೀರಾಮಯ್ಯ, ಸದಸ್ಯರಾದ ಶರಣಯ್ಯ ಹಿರೇಮಠ್, ಮುತ್ತುರಾಜ್, ಸಿ.ಭಾಸ್ಕರ್, ರಮೇಶ್ ಕುಮಾರ್, ಎ.ಸಿ.ಗುರುಸ್ವಾಮಿ, ಮಲ್ಲಿಕಾರ್ಜುನ, ನಾಗರಾಜ್, ಇ.ಸಿ.ಚನ್ನಬಸವರಾಜು, ಗುರುಸಿದ್ಧಯ್ಯ ಇದ್ದರು.

‘ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಇತಿಹಾಸ’ ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯತ್ವವನ್ನು ಪಡೆದಿರುವ ಶಫಿ ಅಹಮದ್‌ಗೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಭಿನಂದನೆ ಸ್ವಿಕರಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT