ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಬಳ್ಳಾಪುರ: ಕುಡಿಯುವ ನೀರಿಗೆ ತತ್ವಾರ

ಜಕ್ಕಲಮೊಡಗು ಜಲಾಶಯದಲ್ಲಿ ನೀರಿನಮಟ್ಟ ದಿನದಿಂದ ದಿನಕ್ಕೆ ಕುಸಿತ
Published 6 ಮಾರ್ಚ್ 2024, 4:23 IST
Last Updated 6 ಮಾರ್ಚ್ 2024, 4:23 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಕ್ಕಲಮೊಡಗು ಜಲಾಶಯದಲ್ಲಿ ನೀರಿನಮಟ್ಟ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಇದು ನಗರಸಭೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ ಎರಡೂ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಜಲಾಶಯ ಜಕ್ಕಲಮೊಡಗು. ಗರಿಷ್ಠ 58 ಅಡಿಯಷ್ಟು ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ. ಆದರೆ, ಈಗ ನೀರಿನ ಮಟ್ಟ 26 ಅಡಿಗಳಿಗೆ ಕುಸಿತವಾಗಿದೆ.

1.25 ಲಕ್ಷ ಜನಸಂಖ್ಯೆ ಹೊಂದಿರುವ ದೊಡ್ಡಬಳ್ಳಾಪುರ ನಗರದಲ್ಲಿ14,500 ಕೊಳಾಯಿ ಸಂಪರ್ಕ ಇದೆ. ಪ್ರತಿದಿನ ನಗರಕ್ಕೆ 16.8 ಎಂ.ಎಲ್‌.ಡಿ (ದಶಲಕ್ಷ ಲೀಟರ್‌) ನೀರಿನ ಅಗತ್ಯವಿದೆ. ಆದರೆ, ಜಕ್ಕಲಮೊಡಗು ಜಲಾಶಯದಿಂದ ಪ್ರತಿದಿನ ಸರಬರಾಜು ಆಗುತ್ತಿರುವುದು 2 ಎಂ.ಎಲ್‌.ಡಿ ನೀರು ಮಾತ್ರ. ಉಳಿದ ನೀರಿಗೆ ನಗರಸಭೆ ಅವಲಂಬಿಸಿರುವುದು ಕೊಳವೆ ಬಾವಿಗಳನ್ನು.

ನಗರದ ಅಂಚಿನ ಅರಳುಮಲ್ಲಿಗೆ, ಪಾಲನಜೋಗಹಳ್ಳಿ ಕೆರೆ ಅಂಗಳ ಸೇರಿದಂತೆ ನಗರದ ಅಂಚಿನ ಸರ್ಕಾರಿ ಜಾಗ ಹಾಗೂ ರಸ್ತೆ ಬದಿಗಳಲ್ಲಿ ಕೊರೆಸಲಾಗಿರುವ 95 ಕೊಳವೆ ಬಾವಿಗಳಿಂದ 4 ಎಂ.ಎಲ್‌.ಡಿ ನೀರು ಲಭ್ಯವಾಗುತ್ತಿದೆ. ಮಳೆ ಬರುವುದು ವಿಳಂಬವಾದರೆ 95 ಕೊಳವೆ ಬಾವಿಗಳ ಪೈಕಿ ಅದೆಷ್ಟು ಬತ್ತಿ ಹೋಗಲಿವೆಯೋ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. ನಗರದಲ್ಲಿ ಈಗ 5 ರಿಂದ 6 ದಿನಗಳಿಗೆ ಒಮ್ಮೆ ಕೊಳಾಯಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

‘2022ರ ಆಗಸ್ಟ್‌ನಲ್ಲಿ ಜಕ್ಕಲಮೊಡಗು ಜಲಾಶಯ ನಾಲ್ಕು ಬಾರಿ ತುಂಬಿ ಕೋಡಿ ಹರಿದಿತ್ತು. ಆದರೆ, ಈ ಬಾರಿ ಮಳೆಯ ತೀವ್ರ ಕೊರತೆಯಿಂದಾಗಿ ಜಲಾಶಯದಲ್ಲಿ ಕಡಿಮೆ ನೀರು ಶೇಖರಣೆಯಾಗಿತ್ತು. ಈಗಿನ ನೀರಿನ ಶೇಖರಣೆ ಎರಡೂವರೆ ತಿಂಗಳ ಕಾಲ ಬಳಸಬಹುದಾಗಿದೆ’ ಎನ್ನುತ್ತಾರೆ ನಗರಸಭೆ ಕಾರ್ಯನಿರ್ವಾಹಕ ಎಂಜಿನಿಯರ್‌ ಜಿ.ರಾಮೇಗೌಡ.

ಅಂಕಿ-ಅಂಶ

ನಗರಕ್ಕೆ ಪ್ರತಿದಿನ 16.8 ಎಂ.ಎಲ್‌.ಡಿ ನೀರಿನ ಅಗತ್ಯ ನಗರದಲ್ಲಿ 6 ದಿನಗಳಿಗೆ ಒಮ್ಮೆ ನೀರು ಸರಬರಾಜು 14500 ಕೊಳಾಯಿ ಸಂಪರ್ಕ ಜಕ್ಕಲಮೊಡಗು ಜಲಾಶಯದಿಂದ ಪ್ರತಿ ದಿನ 2 ಎ.ಎಲ್‌.ಡಿ 95 ಕೊಳವೆ ಬಾವಿಗಳಿಂದ ನಗರಕ್ಕೆ ನೀರು ಜಕ್ಕಲಮೊಡಗು ಜಲಾಶಯ ಗರಿಷ್ಠಮಟ್ಟ 58 ಈಗಿನ ನೀರಿನ ಮಟ್ಟ 27 ಅಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT