ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳತೂರು ಬಂಡಿದ್ಯಾವರ ಕರಗ

Published 20 ಮೇ 2024, 5:46 IST
Last Updated 20 ಮೇ 2024, 5:46 IST
ಅಕ್ಷರ ಗಾತ್ರ

ಹೊಸಕೋಟೆ: ತಾಲ್ಲೂಕಿನ ಕೊಳತೂರು ಗ್ರಾಮದಲ್ಲಿ ಭಾನುವಾರ ಬಂಡಿ ದ್ಯಾವರ ಕರಗ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ದಂಪತಿ ಕರಗ ಹೊರುವ ವಿಶಿಷ್ಟ ಆಚರಣೆಗೆ ಎರಡು ಸ್ಥಳಗಳಲ್ಲಿ ಹೊಂಗೆ ಸೊಪ್ಪಿನ ಚಪ್ಪರ ಹಾಕಿ ಹೊಸದ್ಯಾವರ ಗುಡಿ ನಿರ್ಮಿಸಿ  ಬಂಡಿದ್ಯಾವರ ಆಚರಣೆಗೆ ಚಾಲನೆ ನೀಡಲಾಯಿತು. 

ಪೂಜೆ ಮಾಡಿದ ನಂತರ ಬಂಡಿಗಳ ಸಮೇತ ದಂಪತಿಗಳು ಕರಗ ಹೊತ್ತು ಸುಮಾರು ಒಂದು ಕಿಲೋ ಮೀಟರ್ ದೂರದ ಸೋಲೂರು ಗ್ರಾಮದ ಬಳಿ ನಡೆದುಕೊಂಡು ಹೋದರು. ಅಲ್ಲಿಯೇ ಹೊಂಗೆ ಚಪ್ಪರದ ಹೊಸದ್ಯಾವರದ ಗುಡಿಯ ಬಳಿ ಹಾಸಿದ ಸೀರೆಗಳ ಮೇಲೆ ತೆರಳಿ  ಪೂಜೆ ಮಾಡಿದರು. ಅಲ್ಲಿಂದ ಮತ್ತೆ ವಾಪಸ್ ಗ್ರಾಮಕ್ಕೆ ನಡೆದುಕೊಂಡು ವಾಪಸ್‌ ಬರುತ್ತಿದ್ದಂತೆಯೇ ಮಳೆ ಸುರಿಯಲು ಪ್ರಾರಂಭಿಸಿತು. 

ಟ್ರಾಫಿಕ್ ಜಾಮ್: ಬಂಡಿದ್ಯಾವರ ಮತ್ತು ಕರಗ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯ ಜನರು ಆಗಮಿಸಿದ್ದರಿಂದ ಬೆಂಗಳೂರು–ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ಕೊಳತೂರು ಮತ್ತು ಮಾಲೂರು ರಸ್ತೆಯವರೆಗೆ ಸವಾರರು ಪರದಾಡುವಂತಾಯಿತು.

ಶಾಸಕ ಶರತ್ ಬಚ್ಚೇಗೌಡ, ಬಿಡಿಸಿಸಿ ನಿರ್ದೇಶಕ ಸತೀಶ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ,  ಶಂಕರನಾರಾಯಣ ಭಾಗವಹಿಸಿದ್ದರು.

ಬಂಡಿದ್ಯಾವರ ನಿಮಿತ್ತ ಅಲಂಕಾರಗೊಂಡಿದ್ದ ಬಂಡಿಗಳು.
ಬಂಡಿದ್ಯಾವರ ನಿಮಿತ್ತ ಅಲಂಕಾರಗೊಂಡಿದ್ದ ಬಂಡಿಗಳು.
ಊರ ಹೊರವಲಯದಲ್ಲಿ ಹೊಂಗೆ ಗುಡಿಸಿಲ ಹೊಸದ್ಯಾವರ ಗುಡಿಯ ಬಳಿ ಪೂಜೆ ಸಲ್ಲಿಸಿದ ಗ್ರಾಮಸ್ಥರು.
ಊರ ಹೊರವಲಯದಲ್ಲಿ ಹೊಂಗೆ ಗುಡಿಸಿಲ ಹೊಸದ್ಯಾವರ ಗುಡಿಯ ಬಳಿ ಪೂಜೆ ಸಲ್ಲಿಸಿದ ಗ್ರಾಮಸ್ಥರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT