ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನ್ನೇರುಘಟ್ಟ ಉದ್ಯಾನ: ರಾಜ್ಯದಲ್ಲಿಯೇ ಮೊದಲ ಚಿರತೆ ಸಫಾರಿ ಆರಂಭಕ್ಕೆ ಸಿದ್ಧತೆ

ಚಿರತೆ ಸಫಾರಿ
Published 20 ಫೆಬ್ರುವರಿ 2024, 15:39 IST
Last Updated 20 ಫೆಬ್ರುವರಿ 2024, 15:39 IST
ಅಕ್ಷರ ಗಾತ್ರ

ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ರಾಜ್ಯದಲ್ಲಿಯೇ ಮೊದಲ ಮತ್ತು ದೇಶದ ಅತಿದೊಡ್ಡ ಚಿರತೆ ಸಫಾರಿ ಆರಂಭಕ್ಕೆ ಸಿದ್ಧತೆ ಅಂತಿಮ ಹಂತದಲ್ಲಿದೆ. ಎರಡು ತಿಂಗಳಲ್ಲಿ ಚಿರತೆ ಸಫಾರಿ ಉದ್ಘಾಟನೆಗೊಳ್ಳಲಿದೆ.

ಬನ್ನೇರುಘಟ್ಟ ಜೈವಿಕ ಉದ್ಯಾನದ 20 ಹೆಕ್ಟೇರ್‌ ಪ್ರದೇಶದಲ್ಲಿ ಚಿರತೆ ಸಫಾರಿಗೆ ಸಿದ್ಧತೆ ಮಾಡಲಾಗಿದೆ. ಚಿರತೆಗಳು ಹೊರ ಬರಲು ಸಾಧ್ಯವಾಗದಂತೆ ಎತ್ತರವಾದ ಮೆಶ್‌ ಮತ್ತು ಬೇಲಿ ಹಾಕಲಾಗಿದೆ. ಮಹಾರಾಷ್ಟ್ರ ಮತ್ತು ನಾಗಪುರದಲ್ಲಿ ಚಿರತೆ ಸಫಾರಿ ಇದೆ. ಆದರೆ, ಇವೆಲ್ಲಕ್ಕಿಂತ ಬನ್ನೇರುಘಟ್ಟ ಸಫಾರಿ ದೊಡ್ಡದಾಗಿದೆ. ಸದ್ಯ 12 ಚಿರತೆಗಳಿದ್ದು ಇವುಗಳನ್ನು ಸಫಾರಿಗೆ ಪಳಗಿಸಲು ಪ್ರಾಣಿ ಪಾಲಕರು ಶ್ರಮಿಸುತ್ತಿದ್ದಾರೆ. ಚಿರತೆಗಳ ಆವರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ಮಿಸಲಾಗಿದೆ. ಚಿರತೆ ಸಫಾರಿಗೆ ಬಹುತೇಕ ಸಿದ್ಧತೆ ಪೂರ್ಣಗೊಂಡಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದರು.

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸಿಂಹ ಮತ್ತು ಹುಲಿ ಸಫಾರಿ ಮಾದರಿಯಲ್ಲಿ ಚಿರತೆ ಸಫಾರಿ ಕೂಡ ತ್ವರಿತವಾಗಿ ಪ್ರಾರಂಭಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶೀಘ್ರ ಕಾರ್ಯರೂಪಕ್ಕೆ ತರಲಾಗುತ್ತಿದೆ. ಕೆಲ ತಿಂಗಳು ಹಿಂದೆ ಉದ್ಯಾನದಲ್ಲಿ ಚಿರತೆಗಳು ಏಕಾಏಕಿ ಮೃತಪಟ್ಟಿದ್ದರಿಂದ ಚಿರತೆ ಸಫಾರಿಗೆ ಹಿನ್ನೆಡೆಯಾಗಿತ್ತು. ಇದೀಗ ಉದ್ಯಾನದಲ್ಲಿ ಚಿರತೆಗಳು ಹೊಂದಾಣಿಕೆಯಾಗುತ್ತಿವೆ ಮತ್ತು ಆರೋಗ್ಯದಲ್ಲಿ ಸ್ಥಿರತೆ ಇದೆ. ಹಾಗಾಗಿ ಸಫಾರಿ ಪ್ರಾರಂಭಕ್ಕೆ ವೇಗ ನೀಡಲಾಗಿದೆ. ಬೇರೆಡೆಯಿಂದ ತಂದಿರುವ ಚಿರತೆಗಳು ಹೊಂದಾಣಿಕೆ ಮತ್ತು ಸಹಬಾಳ್ವೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಮೆಶ್‌ನಲ್ಲಿರುವ ಚಿರತೆಗಳು
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿನ ಮೆಶ್‌ನಲ್ಲಿರುವ ಚಿರತೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT