ಜನಪದ ಸಾಹಿತ್ಯದ ಮೌಲ್ಯ ಉಳಿಸಿ

7
ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್‌ ಉದ್ಘಾಟನೆ

ಜನಪದ ಸಾಹಿತ್ಯದ ಮೌಲ್ಯ ಉಳಿಸಿ

Published:
Updated:
Deccan Herald

ಕನಕಪುರ: ಬದಲಾದ ಹೊಸ ಆಧುನಿಕತೆಯಿಂದ ನಾಡಿನ ಸಾಂಸ್ಕೃತಿಕ ಕಲಾ ಸಂಪತ್ತಿಗೆ ಕುತ್ತು ಬರುತ್ತಿದೆ. ಅದನ್ನು ಉಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲೆ ಇದೆ ಎಂದು ಕನ್ನಡ ಜಾನಪದ ಪರಿಷತ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಎಂ. ಚಂದ್ರು ತಿಳಿಸಿದರು.

ನಗರದ ರಂಗನಾಥ ಬಡಾವಣೆಯ ಹೊಂಗಿರಣದಲ್ಲಿ ಏರ್ಪಡಿಸಿದ್ದ ನೂತನ ‘ಕನ್ನಡಾಂಬೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್‌ ಉದ್ಘಾಟನೆ’ ಮತ್ತು ಉಪನ್ಯಾಸ ಹಾಗೂ ಗೀತಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಪದ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಕೆಲವರು ತಮ್ಮ ಸ್ವಾರ್ಥ ಹಿತಾಸಕ್ತಿಗೆ ಅನುಗುಣವಾಗಿ ಅದಲು ಬದಲು ಮಾಡಿ, ತಿರುಚಿ ಅರ್ಥಹೀನ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಜನಪದದ ಮೂಲ ಉದ್ದೇಶ ಮತ್ತು ಅದರ ಮೌಲ್ಯಗಳನ್ನು ಕೊಲ್ಲಲಾಗುತ್ತಿದೆ ಎಂದು ವಿಷಾದಿಸಿದರು.

ಸರ್ಕಾರ ಕಲಾವಿದರ ಸಂರಕ್ಷಣಾ ಕಾರ್ಯದ ಯೋಜನೆ ರೂಪಿಸಿ ಮೂಲ ಕಲಾವಿದರಿಗೆ ಅಗತ್ಯ ಸೌಲಭ್ಯ, ಆರ್ಥಿಕ ಸಹಕಾರ, ಜೀವವಿಮೆ, ಸಾಂಸ್ಕೃತಿಕ ಗೌರವ ಪ್ರಶಸ್ತಿ ನೀಡುವ ಮೂಲಕ ಕಲಾ ಪ್ರತಿಭೆ ಪ್ರೋತ್ಸಾಹಿಸಬೇಕೆಂದು ಒತ್ತಾಯಿಸಿದರು.

ವಕೀಲ ಕಾಮೇಶ್ ಮಾತನಾಡಿ, ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಜಾನಪದ ಕಲೆ ಉಳಿಸಿ ಬೆಳೆಸಿ ಪ್ರೋತ್ಸಾಹಿಸುವುದರ ಜತೆಗೆ ಯುವಶಕ್ತಿಯನ್ನು ಸಾಂಸ್ಕೃತಿಕ ರಾಯಭಾರಿಗಳಾಗಲು ಇಂತಹ ಕಾರ್ಯಕ್ರಮ ಸಹಕಾರಿ ಎಂದು ಅಭಿಪ್ರಾಯಪಟ್ಟರು.

ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ಭಾಸ್ಕರ್‌ ಮಾತನಾಡಿ, ಇಂದಿನ ಪೀಳಿಗೆ ವಿದ್ಯಾರ್ಥಿಗಳು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿ ತ್ಯಾಗ ಮಾಡಿದ ನಾಯಕರು, ದೇಶಕ್ಕಾಗಿ ಮಡಿದ ಮಹನೀಯರ ಇತಿಹಾಸದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಸಲಹೆ ನೀಡಿದರು. 

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ ‘ಜಾನಪದ ಅಂದು- ಇಂದು’ ಕುರಿತು ಉಪನ್ಯಾಸ ನೀಡಿದರು. ಆಕಾಶವಾಣಿ ಹಿರಿಯ ಕಲಾವಿದ ಚಿಕ್ಕಮರಿಗೌಡ, ರಾಜ್ಯಮಟ್ಟದ ಕಲಾವಿದ ಚಂದ್ರಾಜ ಸಿ,ಜಾನಪದ ಗಾಯಕರಾದ ಬರಗೂರು ಪುಟ್ಟರಾಜು, ನಾರಾಯಣರಾವ್ ಪಿಸ್ಸೆ ತಂಡದವರು ಜಾನಪದ, ತತ್ವಪದ, ವಚನ ಗಾಯನ ನಡೆಸಿಕೊಟ್ಟರು.

ಸಮಾಜಸೇವಕ ಡಿ.ದೇವ್, ಕನ್ನಡಾಂಬೆ ಟ್ರಸ್ಟ ಅಧ್ಯಕ್ಷ ಅಸ್ಗರ್ ಖಾನ್, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಚೀಲೂರು ಮುನಿರಾಜು, ರಾಜ್ಯ ಒಕ್ಕಲಿಗರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಬ್ಬಾಡಿ ಕಾಡೇಗೌಡ, ಸ್ವ.ಕ.ರ.ವೇ ತಾಲ್ಲೂಕು ಅಧ್ಯಕ್ಷ ಅಂಗಡಿ ರಮೇಶ್, ಪದಾಧಿಕಾರಿಗಳಾದ ಎಸ್.ಜೈರಾಮೇಗೌಡ, ಅಪ್ಪಾಜಿ, ಕನ್ನಡ ಸೇನೆ ಅಧ್ಯಕ್ಷ ಜಯಸಿಂಹ, ನಗರಸಭೆ ಸದಸ್ಯ ಅಮ್ಜದ್ ಅಲಿ ಖಾನ್, ಮಹಮ್ಮದ್ ಹನ್ನನ್ ಪಾಷ, ಹರೀಶ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !