ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊಡ್ಡಬಳ್ಳಾಪುರ: ದೇವಾಲಯಕ್ಕೆ ನುಗ್ಗಿದ ರೋಡ್ ರೋಲರ್‌

Published 4 ಜೂನ್ 2024, 0:10 IST
Last Updated 4 ಜೂನ್ 2024, 0:10 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ತೇರಿನ ಬೀದಿಯ ಶ್ರೀಕಂಠೇಶ್ವರ ದೇವಾಲಯ ಬಳಿ ಸೋಮವಾರ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರೋಡ್ ರೋಲರ್‌ವೊಂದು ದೇವಾಲಯದ ಗೋಡೆಗೆ ಗುದ್ದಿದೆ. 

ನಗರದ ಮುಖ್ಯರಸ್ತೆಯಲ್ಲಿ ರಸ್ತೆ ಡಾಂಬರೀಕರಣ ನಡೆಯುತ್ತಿದೆ. ಅಂತಿಮ ಹಂತದ ಡಾಂಬರೀಕರಣ ಬಾಕಿ ಇತ್ತು. ಇದಕ್ಕಾಗಿ ರಾತ್ರಿಯೇ ರಸ್ತೆ ಬದಿ ರೋಡ್ ರೋಲರ್‌ ನಿಲ್ಲಿಸಲಾಗಿತ್ತು.

ಸೋಮವಾರ ಬೆಳಗ್ಗೆ ಅಕ್ಕಿ ಮೂಟೆಗಳಿದ್ದ ಲಾರಿಯೊಂದು ನಗರದ ಮುಖ್ಯರಸ್ತೆಯಿಂದ ತೇರಿನ ಬೀದಿ ರಸ್ತೆಗೆ ತಿರುವು ಪಡೆಯುತ್ತಿತು. ಈ ವೇಳೆ ಮುಖ್ಯರಸ್ತೆಯಲ್ಲಿ ಆಟೊ ಅಡ್ಡ ಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ರೋಡ್ ರೋಲರ್‌ಗೆ ಹಿಂದಿನಿಂದ ರಭಸದಿಂದ ಡಿಕ್ಕಿ ಹೊಡೆಯಿತು.

ರಸ್ತೆ ಇಳಿಜಾರಾಗಿದ್ದರಿಂದ ರೋಡ್ ರೋಲರ್ ನೇರವಾಗಿ ಮುಖ್ಯರಸ್ತೆಯಿಂದ ಎದುರಿನಲ್ಲಿದ್ದ ತೇರಿನ ಬೀದಿ ರಸ್ತೆಯ ಶ್ರೀಕಂಠೇಶ್ವರ  ದೇವಾಲಯದ ಗೋಡೆಗೆ ಡಿಕ್ಕಿ ಹೊಡೆದಿದೆ. ಲಾರಿಯ ಮುಂಭಾಗ ಜಖಂಗೊಂಡಿದೆ.

ಲಾರಿ ಡಿಕ್ಕಿಯಿಂದ ಮುಖ್ಯರಸ್ತೆಯಲ್ಲಿದ್ದ ದ್ವಿಚಕ್ರ ವಾಹನಕ್ಕೆ ಸಣ್ಣ ಹಾನಿಯಾಗಿದೆ. ಇದರ ಹೊರತಾಗಿ ಯಾವುದೇ ಅನಾಹುತ ಆಗಿಲ್ಲ. ಬೆಳಗಿನ ಶಾಲೆಯ ಸಮಯ ಆಗಿದ್ದರಿಂದ ಇಲ್ಲಿ ವಾಹನ ಸಂಚಾರ ದಟ್ಟಣೆಯು ಹೆಚ್ಚಾಗಿತ್ತು. ಸ್ಥಳೀಯರ ಮುಂಜಾಗ್ರತೆಯಿಂದಾಗಿ ದೊಡ್ಡ ಅನಾಹುತ ತಪ್ಪಿದೆ. ಘಟನೆಯಿಂದಾಗಿ ಕೆಲ ಕಾಲ ವಾಹನ ದಟ್ಟಣೆ ಉಂಟಾಗಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು.

ರೋಡ್‌ ರೋಲರ್‌ಗೆ ಡಿಕ್ಕಿ ಹೊಡೆದು ಜಖಂಗೊಂಡಿರುವ ಲಾರಿ
ರೋಡ್‌ ರೋಲರ್‌ಗೆ ಡಿಕ್ಕಿ ಹೊಡೆದು ಜಖಂಗೊಂಡಿರುವ ಲಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT