ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಕೊರತೆ: ಸೊಪ್ಪಿನ ಬೆಲೆ ಏರಿಕೆ

Published 3 ಮೇ 2024, 13:35 IST
Last Updated 3 ಮೇ 2024, 13:35 IST
ಅಕ್ಷರ ಗಾತ್ರ

ವಿಜಯಪುರ(ದೇವಹನಹಳ್ಳಿ): ನೀರಿನ ಕೊರತೆಯಿಂದ ‌ಸೊಪ್ಪು ಬೆಳೆಯುವುದು ಇಳಿಮುಖ ಆಗಿದ್ದು, ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿ ಸೊಪ್ಪಿನ ಬೆಲೆ ಏರಿಕೆಯಾಗಿದೆ‌.

₹10 ಇದ್ದ ಒಂದು ಕಟ್ಟು ದಂಟಿನ ಸೊಪ್ಪು ₹20, ಮೆಂತ್ಯೆ ₹10ರಿಂದ 40ಕ್ಕೆ, ಪಾಲಕ್ ₹10ರಿಂದ ₹30,  ಸಬ್ಬಕ್ಕಿ ₹15 ರಿಂದ ₹40ಕ್ಕೆ ಏರಿಕೆಯಾಗಿದೆ.

ತೋಟಗಳಲ್ಲಿ ಸೊಪ್ಪುಗಳು ಸಿಗುತ್ತಿಲ್ಲ. ನೀರಾವರಿ ಸೌಲಭ್ಯ ಇರುವ ರೈತರು ಮಾತ್ರ ಸೊಪ್ಪು ಬೆಳೆಯುತ್ತಿದ್ದಾರೆ. ತೋಟಗಳಲ್ಲೆ ಬೆಲೆ ಜಾಸ್ತಿಯಾಗಿದೆ. ಸೊಪ್ಪು ಕಿತ್ತುಕೊಂಡು ಬಂದು, ತೊಳೆದು, ಕಟ್ಟು ಕಟ್ಟಿ, ಮಾರುವುದಕ್ಕೆ ಕೂಲಿ ಸೇರಿಸಿ, ಒಂದು ಕಟ್ಟಿಗೆ ₹5 ರೂಪಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ವ್ಯಾಪಾರಿಗಳು.

ತೋಟದಲ್ಲೆ ₹25 ಖರ್ಚು ಬರುತ್ತಿದೆ. ಹಳ್ಳಿಗಳಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೆ, ಪೆಟ್ರೋಲ್ ಖರ್ಚು ಸೇರಿ ₹7 ರೂಪಾಯಿ ಲಾಭ ಇಟ್ಟುಕೊಳ್ಳುತ್ತೇವೆ ಎಂದು ವ್ಯಾಪಾರಿ ಮುನಿಯಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT