‘ಏನೇ ತಪ್ಪಾದರೂ ಅಧಿಕಾರಿಗಳದ್ದೇ ಹೊಣೆ ’

7
ಪಂಚಾಯಿತಿಗೆ ಅಧಿಕಾರವಿಲ್ಲ ಎಂದು ತಾ.ಪಂ ಮತ್ತು ಗ್ರಾ.ಪಂ ಅಧ್ಯಕ್ಷರ ಊವಾಚ

‘ಏನೇ ತಪ್ಪಾದರೂ ಅಧಿಕಾರಿಗಳದ್ದೇ ಹೊಣೆ ’

Published:
Updated:
Deccan Herald

ದೇವನಹಳ್ಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ಥಳೀಯ ಸರ್ಕಾರಿ ಸ್ವತ್ತು ಉಳಿಸುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಪ್ರಭಾರ ಅಧ್ಯಕ್ಷೆ ಅನಂತಕುಮಾರಿ ತಿಳಿಸಿದರು.

ತಾಲ್ಲೂಕಿನ ಬಿದಲೂರು ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ನಡೆದ ವಿಶೇಷ ಗ್ರಾಮ ಸಭೆ ಉದ್ಘಾಟಿಸಿದ ನಂತರ ಸ್ಥಳೀಯರ ಸಮಸ್ಯೆ ಮತ್ತು ಇಲಾಖಾವಾರು ಪ್ರಗತಿ ಮಾಹಿತಿ ಪಡೆದು ಮಾತನಾಡಿದರು.

ಸ್ಥಳೀಯರ ಕುಂದು ಕೊರತೆ ನಿವಾರಣೆಗೆ ಗ್ರಾಮ ಸಭೆ ನಡೆಸಲು ಸರ್ಕಾರ ಆದೇಶ ಮಾಡಿದೆ. ಗ್ರಾಮಸಭೆ ಎಷ್ಟು ಸಫಲತೆ ಕಾಣುತ್ತಿದೆ ಎಂಬುದು ಮುಖ್ಯವಾಗುತ್ತದೆ. ಅನೇಕ ಜ್ವಲಂತ ಸಮಸ್ಯೆಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಗೆಹರಿಸಬಹುದು ಎಂದರು.

ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸರ್ಕಾರ ಈಗಾಗಲೇ ಕರ್ನಾಟಕ ಆರೋಗ್ಯ ಯೋಜನೆಯಡಿ ಉಚಿತ ಕಾರ್ಡ್ ನೀಡುತ್ತಿದೆ. ವಿಪರ್ಯಾಸವೆಂದರೆ ಸಭೆಗೆ ವೈದ್ಯಾಧಿಕಾರಿಗಳೇ ಗೈರು ಎಂದರೆ ಸಾರ್ವಜನಿಕರಿಗೆ ಮಾಹಿತಿ ನೀಡುವವರು ಯಾರು. ಅನೇಕ ಅಧಿಕಾರಿಗಳು ಗ್ರಾಮ ಸಭೆಗೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಪಿಎಂಸಿ ನಿರ್ದೇಶಕ ಕೆ.ವಿ.ಮಂಜುನಾಥ್ ಮಾತನಾಡಿ, 6,537 ಮತದಾರರನ್ನು ಹೊಂದಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇಕಡ ಒಂದರಷ್ಟು ಜನರು ಗ್ರಾಮ ಸಭೆಗೆ ಹಾಜರಾಗದಿದ್ದರೆ ಹೇಗೆ. ಗ್ರಾಮ ಸಭೆಗೆ ಹೆಚ್ಚು ಜನರಿದ್ದರೆ ಅಧಿಕಾರಿಗಳಿಗೆ ಕೆಲಸ ಮಾಡುವ ಕಾಳಜಿ ಬರುತ್ತದೆ ಎಂದರು.

ಪಶು ವೈದ್ಯಾಧಿಕಾರಿ ರಮೇಶ್ ಮಾತನಾಡಿ, ಜಾನುವಾರು ಗಣತಿ 5 ವರ್ಷಗಳಿಗೊಮ್ಮೆ ನಡೆಸಲಾಗುತ್ತಿದೆ. ಪ್ರಸ್ತುತ ಗಣತಿಗೆ 11 ಸಿಬ್ಬಂದಿ ನಿಯೋಜಿಸಲಾಗಿದೆ. ಡಿ.31ರವರೆಗೆ ನಡೆಯಲಿದ್ದು, ರಾಜ್ಯದ ಆಯವ್ಯಯಕ್ಕೆ ಹೆಚ್ಚು ಅನುಕೂಲವಾಗಲಿದೆ. ಕುರಿ, ಕೋಳಿ, ಹಸು, ನಾಯಿ ಮನೆಯಲ್ಲಿರುವ ಪ್ರತಿಯೊಂದು ಪ್ರಾಣಿ ಮತ್ತು ಜಾನುವಾರುಗಳ ಗಣತಿ ನಡೆಸಿ ಜಿಪಿಎಸ್‌ಗೆ ಅಳವಡಿಸಿ ಬಾರ್ ಕೋಡ್ ನೀಡಲಾಗುತ್ತದೆ. ಕೆಚ್ಚಲು ಬಾವು ಮಾಸಾಚರಣೆ ನಡೆಸಲಾಗುವುದು. ಅಮೃತ ಯೋಜನೆಯಡಿ ಬಡ ಮಹಿಳೆಯರಿಗೆ ಪಶು ಸಾಕಾಣಿಕೆಗೆ ಅವಕಾಶವಿದೆ ಎಂದರು.

ರೈತ ಸಂಘ ತಾಲ್ಲೂಕು ಘಟಕ ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿ, 30ಕ್ಕೂ ಹೆಚ್ಚು ಇಲಾಖೆ ಇದ್ದರೂ ಬೆರಳಣಿಕೆಯಷ್ಟು ಅಧಿಕಾರಿಗಳ ಹಾಜರಿ ಸರಿಯಲ್ಲ. ಮೊದಲು ನೋಟಿಸ್ ನೀಡಿ ಎಂದು ತಾಕೀತು ಮಾಡಿದರು.

ಸ್ಥಳೀಯ ಯುವಕ ಕಿರಣ್ ಮಾತನಾಡಿ, ಪಂಚಾಯಿತಿ ಅಧಿಕಾರಿ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಮುನಿರಾಜು, ನಂದಕುಮಾರ್, ಮಂಜುಳಮ್ಮ, ಸೀತಮ್ಮ, ಲಕ್ಷ್ಮಮ್ಮ , ಗಾಯಿತ್ರಮ್ಮ ,ಭವ್ಯ ಮಹೇಶ್, ಕೆ.ಮುನೀಂದ್ರ ಇದ್ದರು .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !