ಅಸಂಘಟಿತ ಕಾರ್ಮಿಕರು ಸಂಘಟಿತರಾಗಿ: ವಿ.ನಾರಾಯಣಸ್ವಾಮಿ

ದೇವನಹಳ್ಳಿ: ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಅಸಂಘಟಿತ ಕಾರ್ಮಿಕರು ಸಂಘಟಿತರಾದರೆ ಮಾತ್ರ ಸರ್ಕಾರದ ಯೋಜನೆಗಳನ್ನು ಪಡೆಯಲು ಸಾಧ್ಯ ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ರಾಜ್ಯ ಘಟಕ ನಿರ್ದೇಶಕ ವಿ.ನಾರಾಯಣಸ್ವಾಮಿ ತಿಳಿಸಿದರು.
ಸಿದ್ಧಾರ್ಥ ಸೇವಾ ಕೇಂದ್ರ ಆಡಳಿತ ಕಚೇರಿಯಲ್ಲಿ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ವಿವಿಧ ಘಟಕ ಪದಾಧಿಕಾರಿಗಳ ನೇಮಕ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು. ಕಾರ್ಮಿಕರೆಂದರೆ ಗಾರೆ ಮತ್ತು ಬಡಗಿ ಕೆಲಸ ಮಾಡುವರಲ್ಲ. ಕೃಷಿ ಮತ್ತು ತೋಟಗಾರಿಕೆಯಲ್ಲಿ ಕೆಲಸ ಮಾಡುವವರು, ಇಟ್ಟಿಗೆ ಕಾರ್ಖಾನೆ, ಕಲ್ಲುಗಣಿ, ಕಮ್ಮಾರಿಕೆ, ಚಮ್ಮಾರರು ಸೇರಿ 144ಕ್ಕೂ ಹೆಚ್ಚು ವೃತ್ತಿಯಲ್ಲಿ ತೊಡಗಿಸಿಕೊಂಡು ಜೀವನ ನಡೆಸುತ್ತಿರುವರನ್ನು ಕಾರ್ಮಿಕ ಇಲಾಖೆ ಗುರುತಿಸಿದೆ ಎಂದರು.
ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಜಿಲ್ಲಾ ಘಟಕ ಅಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿಕ ಕಾರ್ಮಿಕ ಕಲ್ಯಾಣ ನಿಧಿಗಾಗಿ ಇಟ್ಟಿರುವ ಮೀಸಲು ಹಣ ನೂರಾರು ಕೋಟಿ ಇದೆ. ನಿವೇಶನ ಇರುವ ಕಾರ್ಮಿಕರಿಗೆ ವಸತಿ, ಅಕಾಲಿಕ ಮರಣಕ್ಕೆ ₹5ಲಕ್ಷ ಪರಿಹಾರ, ಅಪಘಾತಕ್ಕೊಳಗಾದರೆ ₹50 ಸಾವಿರದಿಂದ ₹2 ಲಕ್ಷ ಪರಿಹಾರ, ಶಾಶ್ವತ ಅಂಗವಿಕಲರಾದರೆ ₹3 ಲಕ್ಷ ಪರಿಹಾರ ಪಡೆಯಲು ಅವಕಾಶವಿದೆ ಎಂದರು.
ಪುರಸಭೆ ವಾರ್ಡ್ಗಳು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭದ ನಂತರ ಸಾವಿರಾರು ಅಸಂಘಟಿತ ಕಾರ್ಮಿಕರು ತಳವೂರಿದ್ದಾರೆ. ನೋಂದಾಯಿಸುವ ಕೆಲಸ ಗುರುತರ ಜವಾಬ್ದಾರಿ ಎಂದು ಪದಾಧಿಕಾರಿಗಳು ಅರಿಯಬೇಕೆಂದು ಎಂದು ತಿಳಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿಕೃಷ್ಣ, ಕಾರ್ಯದರ್ಶಿ ಮುರುಳಿಕೃಷ್ಣ ,ಮುಖಂಡ ಬುಳ್ಳಹಳ್ಳಿ ಪೂಜಪ್ಪ, ನಾಗರಾಜ್, ನವೀನ್, ವಿನೋದ್ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.