ದೊಡ್ಡಬಳ್ಳಾಪುರ: ತಾಲ್ಲೂಕಿನ ಎಸ್. ಎಸ್.ಘಾಟಿ ಸುಬ್ರಹ್ಮಣ್ಯಸ್ವಾಮಿ ಕ್ಷೇತ್ರ ದಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ದನ ಗಳ ಜಾತ್ರೆಯನ್ನು ಕಾಲುಬಾಯಿ ರೋಗದ ಹಿನ್ನೆಲೆಯಲ್ಲಿ ಈ ಬಾರಿ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಕೆ.ಬಿ.ಸಿದ್ದಲಿಂಗಯ್ಯ ಹೇಳಿದರು.

ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ರೈತರ ಸಭೆಯಲ್ಲಿ ಅವರು ಮಾತನಾಡಿ, ‘ಕಾಲುಬಾಯಿ ರೋಗದ ಹಿನ್ನೆಲೆಯಲ್ಲಿ ಯಾವುದೇ ರೀತಿಯ ದನಗಳ ಜಾತ್ರೆಗಳನ್ನು ನಡೆಸ ದಂತೆ ಜಿಲ್ಲಾಧಿಕಾರಿಗಳು ಆದೇಶ ನೀಡಿ ದ್ದಾರೆ. ಆದರೆ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ ಮಾತ್ರ ಜನವರಿ 6 ರಂದು ನಡೆಯಲಿದೆ. ಡಿಸೆಂಬರ್ 25 ರಿಂದ ನಡೆಯಲಿರುವ ದನಗಳ ಜಾತ್ರೆಯನ್ನು ಮಾತ್ರ ನಿಷೇಧಿಸಲಾಗಿದೆ’ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಮಂಡ್ಯ ಜಿಲ್ಲೆಯ ಪಾಂಡವಪುರದ ರೈತ ಶಾಮಣ್ಣ, ಬೆಂಗಳೂರು ಉತ್ತರ ತಾಲ್ಲೂಕಿನ ಕೆ.ಎಚ್.ಬೈರಪ್ಪ ಮಾತ ನಾಡಿ, ‘ಕಾಲು ಬಾಯಿ ರೋಗ ದೇಶೀಯ ತಳಿಯ ರಾಸುಗಳಿಗೆ ಬರು ವುದಿಲ್ಲ. ಇದಲ್ಲದೆ ಕಾಲುಬಾಯಿ ರೋಗ ಹರಡುವುದೇ ಮಳೆಗಾಲದಲ್ಲಿ. ಈಗ ಮಳೆಗಾಲವು ಮುಕ್ತಾಯವಾಗಿದೆ ಹಾಗೂ ಕಾಲುಬಾಯಿ ರೋಗವು ನಿಯಂತ್ರಣಕ್ಕೆ ಬಂದಿದೆ.

ಈ ಎಲ್ಲ ಕಾರಣಗಳಿಂದಾಗಿ ನೂರಾರು ವರ್ಷ ಗಳಿಂದ ನಡೆದು ಕೊಂಡು ಬಂದಿರುವ ದನಗಳ ಜಾತ್ರೆ ಯನ್ನು ನಿಷೇಧಿಸುವುದು ಸರಿಯಲ್ಲ. ಇದರಿಂದ ರೈತರ ಕೃಷಿ ಚಟುವಟಿಕೆ ಗಳಿಗೆ ಅಡ್ಡಿಯಾಗಲಿದೆ’ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ ಜಾತ್ರೆಯನ್ನು ನಡೆಸಲು ಅನುಮತಿ ನೀಡುವಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ತಹಶೀಲ್ದಾರರ ಮೂಲಕ ಜಿಲ್ಲಾಧಿ ಕಾರಿಗಳಿಗೆ ಮನವಿ ಸಲ್ಲಿಸಿದರು. ಸಭೆಯಲ್ಲಿ ಶಿರಸ್ತೇದಾರ್ ರಮೇಶ್, ಪಶುವೈದ್ಯಾಧಿಕಾರಿ ಡಾ.ರಾಜೇಂದ್ರ, ಎಸ್.ಎಸ್.ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ವ್ಯವಸ್ಥಾಪಕ ನಂಜಪ್ಪ, ಅಧೀಕ್ಷಕ ಮೋಹನ್‌ಕುಮಾರ್ ಮತ್ತಿತ ರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.