ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಕ್ರಮ’

Published : 26 ಸೆಪ್ಟೆಂಬರ್ 2024, 14:48 IST
Last Updated : 26 ಸೆಪ್ಟೆಂಬರ್ 2024, 14:48 IST
ಫಾಲೋ ಮಾಡಿ
Comments

ಹುಕ್ಕೇರಿ: ‘ಶೈಕ್ಷಣಿಕ ಜೀವನದ ಆರಂಭಿಕ ಹಂತಕ್ಕೆ ಭದ್ರ ಬುನಾದಿ ಹಾಕಲು ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಆರಂಭಿಸಿದ್ದು, ಈ ಯೋಜನೆಯಡಿ ಆಯ್ಕೆಯಾದ ಶಾಲೆಗಳಲ್ಲಿ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಲು ಕ್ರಮ ವಹಿಸಲಾಗಿದೆ’ ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು.

ತಾಲ್ಲೂಕಿನ ಸಾರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆರಂಭಿಸಿರುವ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗೆ ಬುಧವಾರ ಚಾಲನೆ ಹಾಗೂ ಅಡುಗೆ ಕೊಠಡಿ ಉದ್ಘಾಟಿಸಿ ಮಾತನಾಡಿದರು.

‘ತಾಲ್ಲೂಕಿನ ಸಾರಾಪುರ, ಹುನೂರ-ಮಾಸ್ತಿಹೊಳಿ, ಪಾಶ್ಚಾಪುರ ಮತ್ತು ಝಂಗಟಿಹಾಳ ಗ್ರಾಮಗಳಲ್ಲಿ ಈಗಾಗಲೇ ಆರಂಭಿಸಲಾಗಿದೆ. ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಈ ಯೋಜನೆ ಅನುಷ್ಠಾನಗೊಳಿಸಬೇಕು’ ಎಂದು ಶಿಕ್ಷಕರಿಗೆ ಹೇಳಿದರು.

ತಹಶೀಲ್ದಾರ್ ಮಂಜುಳಾ ನಾಯಕ ಮಾತನಾಡಿದರು. ಎಸ್‌ಎಇಎಂಸಿ ಅಧ್ಯಕ್ಷ ಶಾಂತಿನಾಥ ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸಯ್ಯದ ಅಮ್ಮಣಗಿ, ಸದಸ್ಯರಾದ ಸತ್ಯಪ್ಪ ಹಾಲಟ್ಟಿ, ಪುಟ್ಟು ಚೌಗಲಾ, ಬಸವರಾಜ ಮಾಲದಿನ್ನಿ, ಮಾಲವ್ವ ಮಾದರ, ಪಿಡಿಒ ಮಹಾದೇವ ಜಿನರಾಳೆ, ಬಿಇಒ ಪ್ರಭಾವತಿ ಪಾಟೀಲ, ಬಿಆರ್ಸಿ ಎ.ಎಸ್.ಪದ್ಮನ್ನವರ ಸೇರಿದಂತೆ ಅನೇಕರು ಇದ್ದರು.

ಇದೆ ವೇಳೆ ಶಾಸಕರು ಕಾರ್ಮಿಕರಿಗೆ ಕಿಟ್ ವಿತರಿಸಿದರು. ಶಾಲೆಯಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನದಡಿ ವಿವಿಧ ಧಾನ್ಯ-ತರಕಾರಿಗಳಿಂದ ತಯಾರಿಸಿದ ವಿವಿಧ ಆಕೃತಿಗಳು ಗಮನ ಸೆಳೆದವು.

ಮುಖ್ಯ ಶಿಕ್ಷಕ ಐ.ಎಂ.ಲಟ್ಟಿ ಸ್ವಾಗತಿಸಿದರು. ಶಿಕ್ಷಕಿ ಕೆ.ಕೆ.ಮೊಖಾಶಿ ನಿರೂಪಿಸಿದರು. ಶಿಕ್ಷಕ ಆರ್.ಎ.ಕುಲಕರ್ಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT