ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಕೆಶಿ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ: ಯತ್ನಾಳ

ಬಿಜೆಪಿ ಸಮಾವೇಶದಲ್ಲಿ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
Published 15 ಏಪ್ರಿಲ್ 2024, 16:15 IST
Last Updated 15 ಏಪ್ರಿಲ್ 2024, 16:15 IST
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ರೈತರ ವಿಚಾರವಾಗಿ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅತ್ಮಹತ್ಯೆ ಮಾಡಿಕೊಂಡರೆ ನಾನು ₹5 ಕೋಟಿ ಪರಿಹಾರ ಕೊಡುತ್ತೇನೆ. ಅವರ ಮಾತನ್ನು ಬೆಂಬಲಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ರೈತರು ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಅವರು ವಿಧಾನಸೌಧದಲ್ಲೇ ಹೇಳಿದ್ದಾರೆ. ನೀವು ಆತ್ಮಹತ್ಯೆ ಮಾಡಿಕೊಂಡು ತೋರಿಸಿ ಎಂದು ನಾನು ಆಗಲೂ ಹೇಳಿದ್ದೆ. ಈಗಲೂ ಹೇಳುತ್ತೇನೆ; ನಮ್ಮ ಬಳಿ ಹಣವಿಲ್ಲದಿದ್ದರೂ ಜನರಿಂದ ಪಟ್ಟಿ ಸಂಗ್ರಹಿಸಿ ನಿಮ್ಮ ಕುಟುಂಬಕ್ಕೆ ಕೊಡುತ್ತೇವೆ’ ಎಂದರು.

‘ತಾನು ಪಂಚಮಸಾಲಿ ಎಂದು ಪುತ್ರಿ ಪ‍ರವಾಗಿ‍ ಮತ ಕೇಳುತ್ತಿರುವ ಶಿವಾನಂದ ಪಾಟೀಲ ಅವರು, ಪಂಚಮಸಾಲಿ ಹೋರಾಟ ನಡೆದಾಗ ಎಲ್ಲಿ ಹೋಗಿದ್ದರು’ ಎಂದೂ ಪ್ರಶ್ನಿಸಿದರು.

‘ಬಿಜೆಪಿ 400 ಸ್ಥಾನಗಳನ್ನು ಗೆದ್ದರೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಬದಲಾವಣೆಯ ಮಾತು ಆಡಿದವರಿಗೆ ಪಕ್ಷದ ಟಿಕೆಟ್‌ ಅನ್ನೇ ಕೊಟ್ಟಿಲ್ಲ’ ಎಂದರು.

ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ‘ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಹರಕೆಯ ಕುರಿ ಮಾಡುತ್ತಿದೆ. ಮುಂದೊಂದು ದಿನ ದೇಶವನ್ನೇ ಬಲಿ ಕೊಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT