ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಮಟ್ಟಕ್ಕೆ: ಜಗದೀಶ ಶೆಟ್ಟರ್

Published 4 ಮೇ 2024, 4:53 IST
Last Updated 4 ಮೇ 2024, 4:53 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ. ಇದರಿಂದ ಹೆಚ್ಚು ಆರ್ಥಿಕ ಚಟುವಟಿಕೆಗಳು ಆರಂಭ ಆಗುತ್ತದೆ. ರೈತರು ಬೆಳೆಯುವ ಬೆಳೆಗಳು ಬೇರೆ ಬೇರೆ ದೇಶಗಳಿಗೆ ರಪ್ತು ಮಾಡಲು ಅವಕಾಶ ಸಿಗಲಿದೆ’ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ತಿಳಿಸಿದರು.‌

ಲೋಕಸಭಾ ಚುನಾವಣೆ ಅಂಗವಾಗಿ ಮಡಿವಾಳ ಸಮಾಜದ ಜೊತೆ ಸಮಾಲೋಚನೆ ಮಾಡಿ ಮಾತನಾಡಿದ ಅವರು, ‘ಮಂಗಲಾ ಅಂಗಡಿ ಅವರು ಕೂಡ ವಿಮಾನ ನಿಲ್ದಾಣ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಹವಾಯಿ ಚಪ್ಪಲಿ ಹಾಕಿಕೊಳ್ಳುವ ಸಾಮಾನ್ಯ ವ್ಯಕ್ತಿ ಕೂಡ ವಿಮಾನದಲ್ಲಿ ಪ್ರಯಾಣ ಮಾಡಬೇಕು ಎಂಬ ಆಸೆ ನರೇಂದ್ರ ಮೋದಿ ಅವರಿಗೆ ಇದೆ. ವಿಮಾನದ ಮೂಲಕ ಅತೀ ಕಡಿಮೆ ದರದಲ್ಲಿ ಬೇರೆಬೇರೆ ಕಡೆ ಪ್ರಯಾಣ ಮಾಡುವ ಅವಕಾಶ ಮೋದಿಯವರು ಕಲ್ಪಿಸಿದ್ದಾರೆ. ವಿಮಾನದ ಮೂಲಕ ಪ್ರಯಾಣ ಮಾಡುವುದರಿಂದ ಬಹಳಷ್ಟು ಸಮಯದ ಉಳಿತಾಯ ಆಗಲಿದೆ‌‌’ ಎಂದು ತಿಳಿಸಿದರು.‌

‘ಈ ಭಾಗದಿಂದ ಸುರೇಶ ಅಂಗಡಿ ಅವರು ನಾಲ್ಕು ಬಾರಿ ಜಯ ಗಳಿಸಿದ್ದಾರೆ. ರೈಲ್ವೆ ಖಾತೆ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಎಲ್ಲಾ ಸಮುದಾಯದ ಯುವಕರಿಗೆ ಸ್ಟಾರ್ಟಪ್ ಮೂಲಕ ಉದ್ಯೋಗ ಮಾಡಲು ಅವಕಾಶ ಕಲ್ಪಿಸಲಾಗಿದೆ‌. ಲೋಕಸಭಾ ಸದಸ್ಯ ಆದ ಮೇಲೆ ಎಲ್ಲಾ ಸಮುದಾಯದ ಹಿತ ಕಾಪಡುವ ಕೆಲಸ ಮಾಡುತ್ತೇನೆ. ಸರ್ಕಾರದ ಎಲ್ಲಾ ಯೋಜನೆಗಳು ಜನರಿಗೆ ತಲುಪಲಿದೆ’ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.‌

ಸಮಾಜದ ಪ್ರಮುಖರಾದ ಬಾಳಪ್ಪ ಮಡಿವಾಳ, ರಾಜಕುಮಾರ ಮಡಿವಾಳ, ಹನುಮಂತ ಮಡಿವಾಳ, ದುಂಡಪ್ಪ ಮಡಿವಾಳ, ಪುಂಡಲೀಕ ಮಡಿವಾಳ, ಬಸವರಾಜ ಮಡಿವಾಳ, ಅಭಿಮನ್ಯು ಮಡಿವಾಳ, ಶಿವು ಮಡಿವಾಳ ಹಲವರು ಇದ್ದರು.

‘ದೂರದೃಷ್ಟಿಯ ಪ್ರಧಾನಿ ಅಗತ್ಯ’

‘ನರೇಂದ್ರ ಮೋದಿಯವರ ಆಡಳಿತ ಅವರ ದೂರದೃಷ್ಟಿ ಹಾಗೂ ಅವರ ಆರ್ಥಿಕ ನೀತಿಯಿಂದ ದೇಶ ಅಭಿವೃದ್ಧಿ ಆಗಿದೆ. ದೇಶವನ್ನು ಸೂಪರ್ ಪವರ್ ಮಾಡಲು ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು’ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.‌

ಬೆಳಗಾವಿ ಉತ್ತರ ಮತಕ್ಷೇತ್ರದ ಚಿತ್ರೆವಾಡನಲ್ಲಿ ಕೊನವಾಳ ಗಲ್ಲಿ ರಾಮಲಿಂಗಖಿಂಡ ಗಲ್ಲಿ ಶಿವಾಜಿ ರಸ್ತೆ ಮುಜಾವರ ಗಲ್ಲಿ ಅನಸೂರಕರ್‌ ಗಲ್ಲಿ ತಿಲಕ್ ಚೌಕ್ ಬಸವನ ಗಲ್ಲಿ ದೇಶಪಾಂಡೆ ಗಲ್ಲಿ ಹಾಗೂ ಮಾರುತಿಗಲ್ಲಿಯ ಪ್ರಮುಖರೊಂದಿಗೆ ಪ್ರಚಾರ ಸಭೆ ನಡೆಸಿ ಮತಯಾಚನೆ ಮಾಡಿದರು.

‘ಉತ್ತಮ ಸರ್ಕಾರದ ಹೇಗೆ ಇರಬೇಕು ಎಂಬುವುದಕ್ಕೆ ನರೇಂದ್ರ ಮೋದಿ ಉದಾಹರಣೆ.‌ ಆರ್ಥಿಕ ನೀತಿ ಗಟ್ಟಿಗೊಳಿಸುವ ಮೂಲಕ ದೇಶದ ಪ್ರಗತಿ ಯಾವ ರೀತಿ ಮಾಡಬೇಕು ಎಂದು ಮೋದಿಯವರು ತೋರಿಸಿಕೊಟ್ಟಿದ್ದಾರೆ.‌ ಭ್ರಷ್ಟರಹಿತ ಆಡಳಿತ ನೀಡಿದ್ದಾರೆ’ ಎಂದರು.

ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಅನಿಲ ಬೆನಕೆ ಪ್ರಮುಖರಾದ ಮುರಘೆಂದ್ರಗೌಡ ಪಾಟೀಲ ನಗರ ಸೇವಕರಾದ ಸಂತೋಷ ಪೇಡನೆಕರ ಜಯತೀರ್ಥ ಸವದತ್ತಿ ಸೇರಿದಂತೆ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT