ಬೆಳಗಾವಿ: ಸೋಮವಾರ ಆರಂಭವಾಗುವ, ವಿಧಾನಮಂಡಲದ 14ನೇ ಚಳಿಗಾಲದ ಅಧಿವೇಶನಕ್ಕೆ 10 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ 6,000 ಪೊಲೀಸರು, ವಿವಿಧ ಇಲಾಖೆಗಳ ಸಿಬ್ಬಂದಿ ಸೇರಿದ್ದಾರೆ.

ಬಹುಪಾಲು ಸಿಬ್ಬಂದಿ ಈಗಾಗಲೇ ನಗರಕ್ಕೆ ಬಂದಿದ್ದಾರೆ. ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗೆ ಶನಿವಾರ ಕರ್ತವ್ಯ ನಿಯೋಜನೆ ಮಾಡಲಾಯಿತು.

ಸುವರ್ಣಸೌಧದ ಸುತ್ತ ಪ್ರತಿ ದಿನ ಉದ್ಯಾನ ನಿರ್ವಹಣೆ, ಸ್ವಚ್ಛತೆ, ಅಡುಗೆ ಬಡಿಸುವುದು ಸೇರಿದಂತೆ ವಿವಿಧ ಕೆಲಸಗಳಿಗೆ 500ಕ್ಕೂ ಹೆಚ್ಚು ಕೂಲಿ ಆಳುಗಳನ್ನು ಬಳಸಿಕೊಳ್ಳಲಾಗುತ್ತಿದೆ.

ವಸತಿಗಾಗಿ 3,000 ಕೊಠಡಿ ಕಾಯ್ದಿರಿಸಲಾಗಿದೆ. ಸರ್ಕಾರಿ ವಸತಿಗೃಹ, ಅತಿಥಿಗೃಹ, ವಿಶ್ವವಿದ್ಯಾಲಯಗಳ ಕೊಠಡಿ, ಖಾಲಿ ಇರುವ ಸರ್ಕಾರಿ ಕಟ್ಟಡ, ಲಾಡ್ಜ್, ಕಲ್ಯಾಣ ಮಂಟಪ ಹಾಗೂ ಬಳಕೆಗೆ ಸೂಕ್ತವಾದ ಅಪಾರ್ಟ್ಮೆಂಟ್ಗಳನ್ನು 12 ದಿನಗಳ ಅವಧಿಗೆ ಬಾಡಿಗೆ ಪಡೆಯಲಾಗಿದೆ.

ಸುವರ್ಣ ಸೌಧ ನಗರದಿಂದ 12 ಕಿ.ಮೀ ದೂರದಲ್ಲಿದೆ. ಅಧಿಕಾರಿ, ಸಿಬ್ಬಂದಿ ಕರೆದೊಯ್ಯಲು– ಕರೆತರಲು 500ಕ್ಕೂ ಹೆಚ್ಚು ವಾಹನಗಳನ್ನು ಚಾಲಕರ ಸಮೇತ ಬಳಸಿಕೊಳ್ಳಲಾಗುತ್ತಿದೆ. ಶೇ 70ರಷ್ಟು ವಾಹನಗಳನ್ನೂ ಬಾಡಿಗೆಗೆ ಪಡೆಯಲಾಗಿದೆ.

ಸಚಿವರು, ಶಾಸಕರು, ಗಣ್ಯರು ಬಂದಿಳಿಯಲು ಸುವರ್ಣಸೌಧ ಆವರಣದಲ್ಲಿ ಒಂದು, ಕುಮಾರಸ್ವಾಮಿ ಬಡಾವಣೆಯಲ್ಲಿ ಇನ್ನೊಂದು ಹೆಲಿಪ್ಯಾಡ್ಗಳನ್ನು ಸಿದ್ಧತೆಯಲ್ಲಿ ಇಡಲಾಗಿದೆ.

ಆಂಬುಲೆನ್ಸ್, ಅಗ್ನಿಶಾಮಕ ದಳ, ತುರ್ತು ಚಿಕಿತ್ಸೆ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಅಧಿವೇಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಡೀ ಸರ್ಕಾರವೇ ಬೆಳಗಾವಿಗೆ ಬರುವ ಕಾರಣ ಮುಂಜಾಗ್ರತೆಯಾಗಿ ಹೆಚ್ಚಿನ ಸಿಬ್ಬಂದಿ ಬಳಸಿಕೊಳ್ಳಲಾಗಿದೆ
ಮೊಹಮ್ಮದ್ ರೋಷನ್, ಜಿಲ್ಲಾಧಿಕಾರಿ ಬೆಳಗಾವಿ

ಪ್ರಸಕ್ತ ವರ್ಷ ಪ್ರತಿಭಟನೆಗಳ ಸಂಖ್ಯೆ ಹೆಚ್ಚಾಗಿದೆ. ಸುವರ್ಣಸೌಧ ಹಾಗೂ ಪ್ರತಿಭಟನಾ ಸ್ಥಳಗಳು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು ಭದ್ರತೆ ಒದಗಿಸಲಾಗುವುದು
ಭೂಷಣ ಬೊರಸೆ, ಪೊಲೀಸ್ ಆಯುಕ್ತ ಬೆಳಗಾವಿ ನಗರ

‘100ರ ಗಡಿ ದಾಟಲಿದೆ ಪ್ರತಿಭಟನೆಗಳ ಸಂಖ್ಯೆ’

ಈ ಬಾರಿ ಪ್ರತಿಭಟನೆಗಳ ಸಂಖ್ಯೆ 100 ಗಡಿ ದಾಟುವ ಸಾಧ್ಯತೆ ಇದೆ. ರಾಜ್ಯದ ವಿವಿಧ ಸಂಘಟನೆಗಳು ಅನುಮತಿ ಪಡೆದಿವೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ. ಸುವರ್ಣ ಉದ್ಯಾನದ ಖಾಲಿ ಜಾಗ ಹಾಗೂ ಹಳೆ ಪಿಬಿ ರಸ್ತೆ ಪಕ್ಕದಲ್ಲಿ ಪ್ರತಿಭಟನೆಗೆ ಶಾಮಿಯಾನ ಹಾಕಲಾಗಿದೆ. ಎರಡೂ ಕಡೆ ವೇದಿಕೆಗಳು ಧ್ವನಿವರ್ಧಕ ಸಲಕರಣೆ ನೀರು ನೆರಳಿನ ವ್ಯವಸ್ಥೆ ಮಾಡಲಾಗಿದೆ. ಸೌಧದಿಂದ ಒಂದೂವರೆ ಕಿ.ಮೀ ದೂರದಲ್ಲಿ ಟೆಂಟ್ ಸಿಟಿ ನಿರ್ಮಿಸಿದ್ದು ಅಲ್ಲಿ 2500 ಪೊಲೀಸರಿಗೆ ವಸತಿ ಕಲ್ಪಿಸಲಾಗಿದೆ. ಇವರು ಪ್ರತಿಭಟನೆಗಳ ಮೇಲೆ ನಿಗಾ ಇಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.