ಬಿ.ಆರ್. ಅಂಬೇಡ್ಕರ ಪುತ್ಥಳಿ ಅನಾವರಣ

7

ಬಿ.ಆರ್. ಅಂಬೇಡ್ಕರ ಪುತ್ಥಳಿ ಅನಾವರಣ

Published:
Updated:
ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಲಾಯಿತು

ಚಿಕ್ಕೋಡಿ: ‘ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಉಜ್ವಲ ಭವಿಷ್ಯ ರೂಪಿಸಿದರೆ ಮಾತ್ರ ಡಾ.ಬಿ.ಆರ್. ಅಂಬೇಡ್ಕರ ಕನಸು ನನಸಾಗಲಿದೆ’ ಎಂದು ದಲಿತ ಮುಖಂಡ ಶೇಖರ ಪ್ರಭಾತ ಹೇಳಿದರು.

ತಾಲ್ಲೂಕಿನ ಕೇರೂರ ಗ್ರಾಮದಲ್ಲಿ ಮಂಗಳವಾರ ಛತ್ರಪತಿ ಶಾಹುಮಹಾರಾಜರ 144ನೇ ಜಯಂತಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ ಪುತ್ಥಳಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವಕರು ಅಂಬೇಡ್ಕರ್ ಹಾಗೂ ಶಾಹುಮಹಾರಾಜರ ಆದರ್ಶ ಪಾಲನೆ ಮಾಡಿದರೆ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯ. ಅಂಬೇಡ್ಕರ್ ಹಾಗೂ ಶಾಹುಮಹಾರಾಜರು ಹಿಂದುಳಿದ ವರ್ಗದ ಜನರ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಶಿಕ್ಷಣಕ್ಕೆ ಒತ್ತು ನೀಡಿ ಸಂಘಟನೆ ಮಾಡಿದಾಗ ಮಾತ್ರ ದಲಿತ ಸಮಾಜ ಉದ್ಧಾರವಾಗುತ್ತದೆ ಎಂಬ ಸಂದೇಶವನ್ನು ಸಹ ಸಾರಿದ್ದಾರೆ’ ಎಂದರು.

ದಲಿತ ಮುಖಂಡ ಮಹಾದೇವ ಮುನ್ನೋಳ್ಳಿಕರ, ಬಿಎಸ್‌ಪಿ ಮುಖಂಡ ದಿವಾಕರ ಬಡಿಗೇರ, ಅಪ್ಪಾಸಾಹೇಬ್ ಕೆಂಚನ್ನವರ ಮಾತನಾಡಿದರು.

ಮಹಾಂತೇಶ ಮಾಳಗೆ, ಮಹಾಂತೇಶ ಬೇವಿನಗಿಡದ, ಸಂಜಯ ಚುಗಚೆ, ಅರುಣ ಬ್ಯಾಳಿ, ಅಶೋಕ ಚುಗಚೆ, ದಯಾನಂದ ಬೇವಿನಗಿಡದ, ಅರುಣ ಹವಾಲ್ದಾರ, ಲಕ್ಷ್ಮಣ ಜಯಗೋಣಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !