ಮಂಗಳವಾರ, ಸೆಪ್ಟೆಂಬರ್ 17, 2019
27 °C

ದರೂರ ಸೇತುವೆ ಪರಿಶೀಲನೆ ಪರಿಶೀಲನೆ

Published:
Updated:
Prajavani

ಅಥಣಿ: ತಾಲ್ಲೂಕಿನ ಹಲ್ಯಾಳ, ದರೂರ ಸೇತುವೆಯ ಗುಣಮಟ್ಟವನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅತ್ಯಾಧುನಿಕ ಯಂತ್ರವನ್ನು ಬಳಸಿ ಪರಿಶೀಲಿಸಿದರು.

ಜತ್ತ- ಜಾಬೋಂಟಿ ರಾಜ್ಯ ಹೆದ್ದಾರಿಯಲ್ಲಿ ದರೂರ ಸಮೀಪ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ 50 ವರ್ಷ ಹಳೆಯ ಸೇತುವೆಯು ಇತ್ತೀಚಿಗೆ ಬಂದ ಪ್ರವಾಹ ವೇಳೆ ಮುಳುಗಡೆಯಾಗಿ 22 ದಿನಗಳು ರಸ್ತೆ ಸಂಪರ್ಕ ಕಡಿತವಾಗಿತ್ತು. ಸಮೀಪದ ತಡೆಗೋಡೆ ಮತ್ತು ರಸ್ತೆ ಕೂಡ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿತ್ತು. ಹೀಗಾಗಿ, ಪರಿಶೀಲನೆ ನಡೆಸಲಾಯಿತು.

‘ಪ್ರವಾಹದಲ್ಲಿ ಮುಳುಗಡೆಯಾಗಿದ್ದ ಎಲ್ಲ ಸೇತುವೆಗಳ ಗುಣಮಟ್ಟವನ್ನೂ ಪರಿಶೀಲಿಸುತ್ತಿದ್ದೇವೆ. ದರೂರ ಸೇತುವೆ ಸ್ಥಿತಿಗತಿಯ ಸಮಗ್ರ ಮಾಹಿತಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ನಂತರ ತಿಳಿಸಲಾಗುವುದು’ ಎಂದು ಎಂಜಿನಿಯರ್ ಮಧುಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಂಡದಲ್ಲಿ ಯಲ್ಲೇಶಗೌಡ, ಕರಿಬಸಪ್ಪಗೋಳ ಇದ್ದರು.

Post Comments (+)