ಗುರುವಾರ , ಡಿಸೆಂಬರ್ 3, 2020
20 °C

12 ದ್ವಿಚಕ್ರವಾಹನಗಳು ಜಖಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಟಿಳಕವಾಡಿಯಲ್ಲಿರುವ ಕಲಾಮಂದಿರದ ಕಾಂಪೌಂಡ್ ಸೋಮವಾರ ಕುಸಿದು ಬಿದ್ದ ಪರಿಣಾಮ, ಅದಕ್ಕೆ ಹೊಂದಿಕೊಂಡಂತೆ ನಿಲ್ಲಿಸಲಾಗಿದ್ದ 12 ದ್ವಿಚಕ್ರವಾಹನಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅಲ್ಲಿ ಆ ಸಂದರ್ಭದಲ್ಲಿ ಜನಸಂಚಾರ ಇರಲಿಲ್ಲವಾದ್ದರಿಂದ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

‘ಸ್ಮಾರ್ಟ್‌ ಸಿಟಿ ಯೋಜನೆ’ಯಲ್ಲಿ ಕಲಾಮಂದಿರದ ಮರುನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕಾಂಪೌಂಡ್‌ ಏಕಾಏಕಿ ಕುಸಿದಿದೆ. ಮಣ್ಣಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ದ್ವಿಚಕ್ರವಾಹನಗಳನ್ನು ಹೊರ ತೆಗೆಯಲು ಮಾಲೀಕರು ಹರಸಾಹಸಪಟ್ಟರು. ಅವುಗಳನ್ನು ಹೊರತೆಗೆದಾಗ ಸಂಪೂರ್ಣ ಜಖಂಗೊಂಡಿರುವುದನ್ನು ಕಂಡು ಕೆಲವರು ಮಾಲೀಕರು ಕಣ್ಣೀರಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.