ಭಾನುವಾರ, ಡಿಸೆಂಬರ್ 6, 2020
22 °C

ಪರಿಹಾರ: ‘ಹಳ್ಳದ’ ಅಡ್ಡ ಹೆಸರು ಬಿಟ್ಟರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ನೆರೆ ಪರಿಹಾರ ತಂತ್ರಾಂಶದಲ್ಲಿ ‘ಹಳ್ಳದ’ ಎಂಬ ಅಡ್ಡ ಹೆಸರಿನ ಎಲ್ಲ ಸರ್ವೇ ನಂಬರ್‌ಗಳ ಮಾಹಿತಿಯನ್ನು ದಾಖಲಿಸಬೇಕು’ ಎಂದು ಆಗ್ರಹಿಸಿ ಆ ಕುಟುಂಬದವರು ಮತ್ತು ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಇಲ್ಲಿ ಕಂದಾಯ ಸಚಿವ ಅರ್. ಅಶೋಕ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

‘ಭೂಮಿ ತಂತ್ರಾಂಶದಲ್ಲಿ ‘ಹಳ್ಳದ’ ಎಂಬ ಅಡ್ಡಹೆಸರಿನ ಪಹಣಿಗಳಲ್ಲಿ ‘ಹಳ್ಳ’ ಎಂದು ತಪ್ಪಾಗಿ ನಮೂದಿಸಲಾಗಿದೆ. ಇದರಿಂದ ಸವದತ್ತಿ ತಾಲ್ಲೂಕಿನ ಚಿಕ್ಕ ಉಳ್ಳಿಗೇರಿ ‘ಹಳ್ಳದ’ ಕುಟುಂಬದವರಿಗೆ ಪರಿಹಾರ ದೊರೆತಿಲ್ಲ. ಇದು ಖಾಸಗಿ ಜಮೀನು ಎಂದು ನಮೂದಿಸಿ, ಬೆಳೆ ಸಮೀಕ್ಷೆಗೆ ಹಾಗೂ ನೆರೆ ಪರಿಹಾರ ಪಡೆಯಲು ಅನುಕೂಲ ಮಾಡಿಕೊಡಬೇಕು’ ಎಂದು ಸಂಘದ ಸಂಚಾಲಕರಾದ ಚೂನಪ್ಪ ಪೂಜಾರಿ ಮತ್ತು ರಾಜ್ಯ ಸಲಹಾ ಸಮಿತಿ ಸದಸ್ಯೆ ಜಯಶ್ರೀ ಗುರಣ್ಣವರ ಒತ್ತಾಯಿಸಿದರು.

‘ತಪ್ಪಾಗಿ ನಮೂದಿಸಿ ರೈತ ಕುಟುಂಬಕ್ಕೆ ತೊಂದರೆ ನೀಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಕೋರಿದರು.

‘2020–21ನೇ ಸಾಲಿನಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿ ಅನುಭವಿಸಿದವರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.